ಬಂಟ್ವಾಳ : ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ನಿರ್ಮಾಣಗೊಂಡಿದ್ದು, ಬ್ರಹ್ಮರಥವನ್ನು ಅಶ್ವತ್ಥಪುರದಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ಸಾಗಾಟ ನಡೆಯಿತು.
ಅಶ್ವತ್ಥಪುರದಲ್ಲಿ ಬೆಳಗ್ಗೆ ಬ್ರಹ್ಮರಥ ಸಾಗಾಟಕ್ಕೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಮೋಹನ್ ಆಳ್ವ ಅವರು ಚಾಲನೆ ನೀಡಿದರು.
ಬಳಿಕ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ವಾಹನ ಜಾಥಾವನ್ನು ಸ್ವಾಗತಿಸಲಾಯಿತು. ಕಲ್ಲೇರಿಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ನಿರಂಜನ್ ಬಾವಂತಬೆಟ್ಟು, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ, ಗುತ್ತಿಗೆದಾರ ರವಿ ಕಕ್ಯಪದವು ಮತ್ತಿತರ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.


ಕಲ್ಲೇರಿಯಿಂದ ಬಾರ್ಯ, ಪುತ್ತಿಲ, ಖಂಡಿಗ, ಉಳಿಬಲು, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕೊರಂಡಿಗೇರಿ, ಅಗ್ಪಲ, ನೆಕ್ಕಿಲಪಲ್ಕೆ, ಪಂಚದುರ್ಗಾ ಪ್ರೌಢಶಾಲೆ, ಕಕ್ಯಪದವು ದ್ವಾರ, ಶ್ರೀ ಬ್ರಹ್ಮಬದರ್ಕಳ ಗರಡಿ, ಜಾರಿಗೆ ದೇವರ ಕಟ್ಟೆ ಮಾರ್ಗವಾಗಿ ವಿವಿಧ ವಾಹನಗಳ ಸಹಿತ ಬ್ಯಾಂಡ್, ವಾದ್ಯ, ಚೆಂಡೆ, ಕಹಳೆಯೊಂದಿಗೆ ವಿಜೃಂಭಣೆಯಿಂದ ಶ್ರೀ ಕ್ಷೇತ್ರದವರೆಗೆ ಮೆರವಣಿಗೆ ನಡೆಯಿತು.
ಮಾಜಿ ಜಿ.ಪಂ. ಸದಸ್ಯ ಜಗದೀಶ ಅಧಿಕಾರಿ, ಜಿ.ಪಂ.ಸದಸ್ಯ ಪದ್ಮಶೇಖರ ಜೈನ್, ಬಾರ್‍ದಡ್ ಗುತ್ತು ಮನೆತನದ ರಾಜವೀರ ಜೈನ್, ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಸಂಚಾಲಕ ಜಾರಪ್ಪ ಶೆಟ್ಟಿ ಖಂಡಿಗ ದಂಪತಿ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಪ್ರ.ಅರ್ಚಕ ಶ್ರೀನಿವಾಸ ಅರ್ಮುಡತ್ತಾಯ, ಸಮಿತಿ ಪದಾಧಿಕಾರಿಗಳಾದ ಕೆ. ಮಾಯಿಲಪ್ಪ ಸಾಲ್ಯಾನ್, ವಿಶ್ವನಾಥ ಸಾಲ್ಯಾನ್ ಬಿತ್ತ, ಮೆನೆಜರ್ ವೀರೇಂದ್ರ ಕುಮಾರ್ ಜೈನ್, ಡೀಕಯ ಕುಲಾಲ್, ಉತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ, ಶಿವಾಜಿ ಫ್ರೆಂಡ್ಸ್, ಶ್ರೀ ಸತ್ಯ ಸಾಯಿ ಸೇವಾಸಮಿತಿ ಸದಸ್ಯರು, ಅರುಣೋದಯ ಯುವಕ ಮಂಡಲದ ಸದಸ್ಯರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here