Monday, September 25, 2023
More

    ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಪರಾರಿ: ಯುವಮೋರ್ಚಾ ಖಂಡನೆ

    Must read

    ಬಂಟ್ವಾಳ : ಬಂಟ್ವಾಳ ತಾಲೂಕು ಮಾಣಿಯಲ್ಲಿ ಕಳೆದ 9 ದಿನಗಳ ಹಿಂದೆ ನಡೆದ 8 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಸರಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದೆ ಆರೋಪಿ ಪರಾರಿಯಾಗಲು ಸಹಕರಿಸಿರುವುದನ್ನು ಬಂಟ್ವಾಳ ಬಿಜೆಪಿ ಯುವಮೋರ್ಚಾವು ತೀವ್ರವಾಗಿ ಖಂಡಿಸುತ್ತದೆ. ಪ್ರಕರಣ ನಡೆದು ಇಷ್ಟು ದಿನಗಳದರೂ ಕೂಡ ಪೋಲಿಸ್ ಇಲಾಖೆ ಆರೋಪಿಗಳನ್ನು ಬಂದಿಸದೆ ಇರುವುದರಿಂದ ಇಲಾಖೆ ಮೇಲಿರುವ ವಿಶ್ವಾಸ ಕಳೆದುಕೊಲ್ಲುವಂತೆ ಆಗಿರುವುದಲ್ಲದೆ ಆರೋಪಿಯ ಸಹವರ್ತಿಗಳು ಬಾಲಕಿಯ ಹೆತ್ತವರಿಗೆ ಬೆದರಿಕೆ ಮತ್ತು ಆಮೀಷಗಳನ್ನು ಒಡ್ಡುವಂತೆ ಆಗಿದೆ. ಈ ಬಗ್ಗೆಯೂ ಇಲಾಖೆ ಸೂಕ್ತ ತನಿಖೆ ನಡೆಸಿ ಆಮೀಷ ಮತ್ತು ಬೆದರಿಕೆ ಒಡ್ಡಿದವರನ್ನು ಪೋಸ್ಕೋ ಕಾಯ್ದೆಯಡಿ ತನಿಖೆಗೊಳಪಡಿಸಿ ಬಂದಿಸಬೇಕಾಗಿ ಯುವಮೋರ್ಚಾವು ಆಗ್ರಹಿಸುತ್ತದೆ. ನಮ್ಮ ತಾಳ್ಮೆ ದೌರ್ಬಲ್ಯವಲ್ಲ ಅದು ನ್ಯಾಯ ಪಡೆದುಕೊಳ್ಳಲು ನೀಡಿರುವ ಅವಕಾಶ ನ್ಯಾಯ ನೀಡದಿದ್ದರೆ ಪಡೆದುಕೊಳ್ಳುವುದು ಅನಿವಾರ್ಯ ಆಗ್ತದೆ.  ಪೋಲೀಸ್ ಇಲಾಖೆ ಕೋಮು ಸೂಕ್ಷ್ಮ ಪ್ರದೇಶವಾದ ಬಂಟ್ವಾಳ ತಾಲೂಕಿನಲ್ಲಿ ಈ ರೀತಿಯ ಪ್ರಕರಣವನ್ನು ಅತೀ ಜರೂರು ಎಂದು ಪರಿಗಣಿಸಿ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಮತ್ತು ಸಹಕರಿಸಿದವರನ್ನು ಎರಡು ದಿವಸಗಳಲ್ಲಿ ಬಂದಿಸಿ ಮುಗ್ದ ಬಾಲಕಿಗೆ ನ್ಯಾಯ ಒದಗಿಸಬೇಕಾಗಿ ಬಂಟ್ವಾಳ ಬಿಜೆಪಿ ಯುವಮೋರ್ಚಾವು ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸುತ್ತದೆ.

    More articles

    LEAVE A REPLY

    Please enter your comment!
    Please enter your name here

    Latest article