ವಿಟ್ಲ: ಮಿತ್ತನಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್‍ಯಕ್ರಮ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಕಾರ್‍ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯರಾದ ಹಾಜಿ ಎ. ಉಸ್ಮಾನ್ ಕರೋಪಾಡಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ ಎಸ್ ಮಹಮ್ಮದ್ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಪಿ.ಸೀತಾರಾಮ ಭಟ್, ಗ್ರಾಮ ಪಂಚಾಯಿತಿ ಸದಸ್ಯರಾದ ಎ ಮಹಮ್ಮದ್ ಅನ್ವರ್ ಕರೋಪಾಡಿ ಮತ್ತು ಇಸ್ಮಾಯಿಲ್ ಸೇರಾಜೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ರೈ, ಉಪಾಧ್ಯಕ್ಷರಾದ ಚಂದ್ರಿಕಾ ,ಕ್ಲಸ್ಟರ್ ಮಟ್ಟದ ಅಧಿಕಾರಿ ಚಂದ್ರಶೇಖರ, ನಿವೃತ್ತ ಮುಖ್ಯೋಪಾಧ್ಯಾಯರಾದ ಭಾಸ್ಕರ, ನಿವೃತ್ತ ಶಿಕ್ಷಕಿಯಾದ ವೀಣಾ ರೆನ್ನಿ ಡಿಸೋಜ, ಮುಖ್ಯ ಶಿಕ್ಷಕಿಯಾದ ಎವುಜಿನ್ ಮೊಂತೆರೋ ಉಪಸ್ಥಿತರಿದ್ದರು.
ಶಿಕ್ಷಕಿಯಾದ ಶಾಂತಲಾ ಮತ್ತು ನಳಿನಾಕ್ಷಿ ಕಾರ್‍ಯಕ್ರಮ ನಿರೂಪಿಸಿದರು.


