(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.೨೫: ಭಾರತ್ ಬ್ಯಾಂಕ್ ಆಧುನಿಕ ಮತ್ತು ವಿಜ್ಞಾನಿಕವಾಗಿ ಹಣಕಾಸು ಸ್ಪಂದನೆಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿರುವ ಕಾರಣ ಇಷ್ಟೊಂದು ಸೇವಾ ಪ್ರಸಿದ್ಧಿಗೆ ಪಾತ್ರವಾಗಿದೆ. ನನ್ನ ಹಣಕಾಸು ವ್ಯವಹಾರದ ಪಾಲುಗಾರ ಭಾರತ್ ಬ್ಯಾಂಕ್ ಅನ್ನಲು ಹೆಮ್ಮೆಯೆಣಿಸುತ್ತದೆ. ನನ್ನನ್ನು ಧನಾತ್ಮಕವಾಗಿ ಬಲಪಡಿಸಿದ ಈ ಬ್ಯಾಂಕ್ ಒಂದು ಸಮರ್ಥ ಗ್ರಾಹಕಸ್ನೇಹಿ ಪಥಸಂಸ್ಥೆ ಆಗಿದೆ. ಗ್ರಾಹಕರ ಸೇವಾತೃಪ್ತಿಯೇ ಇದರ ಉತ್ಕೃಷ್ಟತೆಯಾಗಿದ್ದು ಇವಕ್ಕೆಲ್ಲವೂ ಸಾಮರ್ಥ್ಯಶಾಲಿ ಜಯ ಸುವರ್ಣರ ಸಾರಥ್ಯವೇ ಕಾರಣ ಎಂದು ಸೆಂಟ್ರಲ್ ಹೆಲ್ತ್ ಹೋಮ್ ಭಾಂಡೂಪ್ ಇದರ ಮುಖ್ಯಸ್ಥ ಡಾ| ಕೆ.ರತ್ನಾಕರ್ ಶೆಟ್ಟಿ ನುಡಿದರು.

ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಭಾಂಡೂಪ್ ಪಶ್ಚಿಮದ ಸ್ಥಳಾಂತರಿತ ಶಾಖೆಯನ್ನು ಸ್ಥಳೀಯ ಸುಭಾಷ್ ನಗರದಲ್ಲಿನ ಸ್ಕಾಯ್‌ಲೈನ್ ಸ್ಪಾರ್ಕ್‌ಲ್ ಕಟ್ಟಡಕ್ಕೆ ಸ್ಥಳಾಂತರಿಸಿ ಇಂದಿಲ್ಲಿ ಶುಕ್ರವಾರ ಶುಭಾರಂಭ ಗೊಳಿಸಲಾಗಿದ್ದು ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿದ್ದು ಡಾ| ರತ್ನಾಕರ್ ಶೆಟ್ಟಿ ಮಾತನಾಡಿ ಶುಭಾರೈಸಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಬಿಡಿಸಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್‌ನ್ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ (ಬ್ಯಾಂಕ್‌ನ ಮಾಜಿ ನಿರ್ದೇಶಕ) ದೀಪ ಬೆಳಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆಯನ್ನೂ ಹಾಗೂ ನಿರ್ದೇಶಕಿ ಶಾರದಾ ಸೂರು ಕರ್ಕೇರ ಭದ್ರತಾಕೋಶವನ್ನು ಉದ್ಘಾಟಿಸಿದರು.

ವಿಸ್ತ ತ ಜಾಗಕ್ಕೆ ಸ್ಥಳಾಂತರ ಅಂದರೆ ಸಂಸ್ಥೆಯ ಸಮೃದ್ಧಿಯ ಸಂಕೇತ ಎಂದರ್ಥ. ಸದ್ಯ ೧೦೨ ಶಾಖೆಗಳುಳ್ಳ ಈ ಬ್ಯಾಂಕ್ ಶೀಘ್ರವೇ ೧೫೦ ಶಾಖೆಗಳನ್ನು ಹೊಂದುವಂತಾಗಲಿ. ಗ್ರಾಹಕರ ಆಶಯುತ ಸೇವೆಗೆ ಪಾತ್ರವಾಗಿ ಜನಮನ್ನಣೆಗೆ ಪಾತ್ರವಾಗಿ ಮೆರೆಯಲಿ ಎಂದು ಚಂದ್ರಶೇಖರ ಪೂಜಾರಿ ಆಶಯ ವ್ಯಕ್ತಪಡಿಸಿದರು.

ಬ್ಯಾಂಕ್‌ನ ಪ್ರತಿಷ್ಠಿತ ಗ್ರಾಹಕರೂ ಉದ್ಯಮಿ ಜನಾರ್ದನ ಕದಂ ಮಾತನಾಡಿ ನನ್ನ ಬದುಕಿಗೆ ಪ್ರೇರಣೆ ನೀಡಿದ ಬ್ಯಾಂಕ್ ಇದಾಗಿದೆ. ಎಂದಿಗೂ ಹಣಕಾಸು ವ್ಯವಹಾರಕ್ಕೆ ವಿಶ್ವಾಸರ್ಹ ಬ್ಯಾಂಕ್. ಈ ಸಂಸ್ಥೆಯಲ್ಲಿ ಎಂದಿಗೂ ರಾಜಕಾರಣ ಕಂಡಿಲ್ಲ. ಎಂದರು.

ಉದ್ಯಮಿಗಳಾದ ಧನ್‌ಬದ್ಧೂರ್ ಸಿಂಗ್, ರಾಜೇಶ್ ಅಗರ್ವಾಲ್, ಸಿಎ| ಕಪಾಡಿಯಾ, ಸಂಗೀತಾ ಪಂಕಜ್ ಅಗರ್ವಾಲ್, ರವೀಂದ್ರ ಪೂಜಾರಿ, ಹಿರಿಯ ನಾಗರಿಕ ಪ್ರಭಾಕರ್ ವಿನಾಯಕ್ ಪ್ರಧಾನ್ ಮಾತನಾಡಿ ಭಾರತ್ ಬ್ಯಾಂಕ್‌ನಲ್ಲಿ ತಮ್ಮ ವ್ಯವಹಾರ ಅನುಭವಗಳನ್ನು ಹಂಚಿ ಸಿಬ್ಬಂದಿಗಳ ಸೇವಾ ವೈಖರಿ ಪ್ರಶಂಸಿಸಿ ತಿಳಿಸಿ ಶುಭೇಚ್ಛ ಕೋರಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕರಾದ ಎಲ್.ವಿ ಅವಿನ್, ಎನ್.ಟಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಎಂ. ಎನ್ ಕರ್ಕೇರ, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನ್‌ದಾಸ್ ಎ.ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್, ಮಾಜಿ ನಿರ್ದೇಶಕರಾದ ಎನ್.ಎಂ ಸನಿಲ್, ಎಂ.ಬಿಸನಿಲ್, ಬಿಲ್ಲವರ ಧುರೀಣ್ರಾದ ರಾಘವ ಕೆ.ಕುಂದರ್, ಶಂಕರ್ ಪೂಜಾರಿ, ನಿವೃತ್ತ ಉನ್ನತಾಧಿಕಾರಿಗಳಾದ ಶೋಭಾ ದಯಾನಂದ್, ಸದಾನಂದ ಪೂಜಾರಿ, ನವೀನ್‌ಚಂದ್ರ ಬಂಗೇರ, ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಬ್ಯಾಂಕ್‌ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರಾ, ಉಪ ಪ್ರಧಾನ ಪ್ರಬಂಧಕ ಪ್ರಭಾಕರ್ ಜಿ.ಸುವರ್ಣ, ಸತೀಶ್ ಎಂ.ಬಂಗೇರಾ, ಪ್ರಭಾಕರ ಜಿ.ಪೂಜಾರಿ, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಕಾರ್ಯದರ್ಶಿ ದಿನೇಶ್ ಕೆ.ಸನಿಲ್, ವಿವಿಧ ಶಾಖೆಗಳ ಮುಖ್ಯಸ್ಥರು ಸೇರಿದಂತೆ ಬ್ಯಾಂಕ್‌ನ ನೂರಾರು ಗ್ರಾಹಕರು ಉಪಸ್ಥಿತರಿದ್ದು ಶುಭಾರೈಸಿದರು.

ಶ್ರೀ ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಪೂಜೆ, ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಗೋಪಿನಾಥ್ ಜಿ.ಅವಿನ್ ಪೂಜಾಧಿಗಳಿಗೆ ಸಹಕರಿಸಿದ್ದು, ಜಯಂತ್ ಎನ್.ಪೂಜಾರಿ ಹಾಗೂ ವಿನಯ್ ಸನಿಲ್ ಮತ್ತು ಕವಿತಾ ವಿನಯ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.
ಬ್ಯಾಂಕ್‌ನ ಪ್ರಧಾನ ಪ್ರಬಂಧಕರೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ದಿನೇಶ್ ಬಿ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ದೀಪಾಲಿ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿದರು. ಕು| ನೇಹಾ ಅವಿನ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥ ಜಯಂತ್ ಎನ್.ಪೂಜಾರಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here