ಬಂಟ್ವಾಳ: ಇರಾ ಗ್ರಾಮದ ತಾಳಿತ್ತಬೆಟ್ಟು ದ.ಕ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ಮಂಜೂರುಗೊಂಡ ಬಿಸಿಯೂಟದ ಬಯೊಗ್ಯಾಸ್ ಘಟಕವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ *ಅಬ್ದುಲ್ ರಝಾಕ್ ಕುಕ್ಕಾಜೆ* ರವರು ಉದ್ಘಾಟಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್ ಡಿ ಸೋಜ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಮುರಳಿಧರ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಲೆನ್ನಿ ಡಿ ಸೋಜ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಉಶಾ, ಮುಖ್ಯ ಶಿಕ್ಷಕಿ ಸುಜಾತ ಟಿ ಎಸ್ ಶಿಕ್ಷಕ ವೃಂದ, ಊರ ಗಣ್ಯರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.


