ಬಂಟ್ವಾಳ: ನಮ್ಮ ತುಳುನಾಡ್ ಟ್ರಸ್ಟ್ (ರಿ) ವತಿಯಿಂದ ವಿನ್ಯಾಸಗೊಳಿಸಲಾದ ತುಳುಲಿಪಿ ಕ್ಯಾಲೆಂಡರ್ ತುಳುವೆರೆನ ಕಾಲಕೊಂದೆ ದಿನಾಂಕ 31.12.2018ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಮೃತಹಸ್ತದಲ್ಲಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಲಿಪಿ ತಜ್ಞರಾದ ಡಾ. ಎಸ್. ಆರ್. ವಿಘ್ನರಾಜ್, ನಿವೃತ್ತ ಉಪನ್ಯಾಸಕ ಉಮಾನಾಥ್ ಶೆಣೈ, ನಮ್ಮ ತುಳುನಾಡ್ ಟ್ರಸ್ಟ್ (ರಿ)ನ ಗೌರವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಸ್ಥಾಪಕಾಧ್ಯಕ್ಷರಾದ ಜಿ.ವಿ.ಎಸ್ ಉಳ್ಳಾಲ್, ಸಂಚಾಲಕರಾದ ಯಕ್ಷ ಬೊಳ್ಳಿ ದಿನೇಶ್ ರೈ ಕಡಬ, ವಿದ್ಯಾಶ್ರೀ ಎಸ್, ಅಧ್ಯಕ್ಷರಾದ ಪ್ರಸಾದ್ ಕೊಂಚಾಡಿ, ಕಾರ್ಯದರ್ಶಿಗಳಾದ ಭೂಷಣ್ ಕುಲಾಲ್, ಕಾರ್ಯಾಧ್ಯಕ್ಷರಾದ ಶಿವಾನಂದ ಬೆಳ್ತಂಗಡಿ ಉಪಸ್ಥಿತರಿದ್ದರು.
ಶ್ರೀ ಹರ್ಷೇಂದ್ರ ಹೆಗ್ಗಡೆಯವರು ತುಳು ಲಿಪಿ ಶಾಲೆಯಲ್ಲಿ ಕಲಿಯುವಂತಾಗಬೇಕು. ಕಾಲಕೊಂದೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿದರು.



ತುಳುವೆರೆನ ಕಾಲಕೊಂದೆಯ ಬಗ್ಗೆ ಒಂದಷ್ಟು…
ಮಂಗಳೂರಿನ ‘ನಮ್ಮ ತುಳುನಾಡ್ ಟ್ರಸ್ಟ್’ ತುಳು ಕ್ಯಾಲೆಂಡರ್ ‘ತುಳುವೆರೆನ ಕಾಲಕೊಂದೆ-2019’ ಪ್ರಕಟಿಸಿದೆ. ಇದನ್ನು ಟ್ರಸ್ಟ್‌ನ ಸಂಚಾಲಕರಾದ ವಿದ್ಯಾಶ್ರೀ ಎಸ್ ಕಾಲಕೊಂದೆ ವಿನ್ಯಾಸ ಮಾಡಿದ್ದಾರೆ. ತುಳು ಲಿಪಿ ಮತ್ತು ತುಳು ಸಂಖ್ಯೆಗಳನ್ನೇ ಬಳಸಿರುವುದು ಈ ಕ್ಯಾಲೆಂಡರ್‌ನ ವೈಶಿಷ್ಟ್ಯ.
ಈ ಕ್ಯಾಲೆಂಡರಿನಲ್ಲಿ ವಾರದ ಹೆಸರುಗಳನ್ನು ತುಳು ಲಿಪಿಯಲ್ಲೇ ಬರೆಯಲಾಗಿದೆ. ಐತ್ತಾರ, ಸೋಮಾರ, ಅಂಗಾರೆ… ವಾರದ ಹೆಸರು, ತಿಂಗಳು, ಸಂಕ್ರಮಣ, ಹುಣ್ಣಿಮೆ ಅಮಾವಾಸ್ಯೆಯ ಮಾಹಿತಿಯನ್ನೂ ತುಳುವಿನಲ್ಲೇ ನೀಡಲಾಗಿದೆ.
ತುಳು ಲಿಪಿಯನ್ನು ಕಲಿಯುವ ಆಸಕ್ತರಿಗೆ ಸ್ವರಗಳು, ವ್ಯಂಜನಗಳು, ಇತರ ಅಕ್ಷರಗಳು ಹಾಗೂ ಅಕ್ಷರ ಬಳಕೆಯ ವಿಧಾನಗಳನ್ನು ಈ ಕ್ಯಾಲೆಂಡರಿನಲ್ಲಿ ವಿವರಿಸಲಾಗಿದೆ.