Tuesday, October 31, 2023

ರಸ್ತೆ ಅಗಲೀಕರಣ ದೂರು ಅರ್ಜಿಗಳ ಪರಿಶೀಲನೆ

Must read

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 73 ರ ಬಿ.ಸಿ.ರೋಡಿನಿಂದ ಕೊಟ್ಟಿಗೆಹಾರ 19.800 ನಿಂದ 75.709 ವರೆಗೆ ರಸ್ತೆಯನ್ನು 2 ಲೇನ್ ಗಾಗಿ ಅಗಲಗೊಳಿಸುವ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ.
ಈ‌ ಹಿನ್ನಲೆಯಲ್ಲಿ ಭೂಮಿ ಮಾಲೀಕರು ರಸ್ತೆ ಅಗಲೀಕರಣಕ್ಕೆ ತಕರಾರುಗಳಿವೆ ಎಂದು ನೀಡಿದ ದೂರು ಅರ್ಜಿಗಳ ಬಗ್ಗೆ ಪರಿಶೀಲನೆ ಕಾರ್ಯ ಬುಧವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ನಡೆಯಿತು.


ರಸ್ತೆ ಅಗಲೀಕರಣದ ಬಗ್ಗೆ ದಿನ ಪತ್ರಿಕೆಯಲ್ಲಿ ವಿವರಗಳನ್ನು ಪ್ರಕಟಗೊಂಡ ಬಳಿಕ ಸಂಬಂಧಿಸಿದ ಜಮೀನು ಮಾಲಕರು ತಕರಾರು ಮಾಡಿದ್ದರಿಂದ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ವಿಶೇಷ ಭೂಸ್ವಾಧೀನಧಿಕಾರಿಗಳ ಅಧಿಕಾರಿಗಳು ದೂರು ಅರ್ಜಿಗಳ ಪರಿಶೀಲನೆ ನಡೆಸಿ ಅವರಿಗೆ ಸೂಕ್ತವಾದ ಮಾಹಿತಿ ನೀಡಲಾಯಿತು. ಇನ್ನು ನೀಡದೆ ಇರುವ ತಕರಾರು ದೂರು ಅರ್ಜಿಯನ್ನು ಸ್ಥಳದಲ್ಲಿ ಪಡೆದುಕೊಂಡು ಅವರಿಗೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಮನವಿ ನೀಡಿದರು.
ಸುಮಾರು 36 ಜನರ ವರ್ಗ ಸ್ಥಳವು ರಸ್ತೆಗೆ ತಾಗಿಕೊಂಡಿದೆ, ಈ ಜಮೀನಿನ ಬಗ್ಗೆ ಸರಿಯಾದ ವೈಜ್ಞಾನಿಕ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿ ಫಲಾನುಭವಿಗಳಿಗೆ ನ್ಯಾಯೋಚಿತ ಪರಿಹಾರ ನೀಡುವಂತೆ ತಿಳಿಸಿದ್ದಾರೆ.
ಸಂದರ್ಭದಲ್ಲಿ ಮ್ಯಾನೇಜರ್ ಮಂಜುನಾಥ್, ಸರ್ವೆ ಯರ್ ಕೃಷ್ಣಸ್ವಾಮಿ ಸಿಬ್ಬಂದಿಗಳಾದ ಹನುಮೇಗೌಡ, ರಾಮನಾಥ್ ಹಾಜರಿದ್ದರು.

More articles

Latest article