ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಹಿರಿಯ ನಾಯಕ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಮತ್ತು ಹಿಂದೂ ಸಂಘಟನೆಯ ಪ್ರಮುಖ ರಾದ ಶರಣ್ ಪಂಪ್ ವೆಲ್ ಹಾಗೂ ಜಗದೀಶ್ ಶೇಣವ ಅವರ ಹತ್ಯೆಗೆ ಆತ್ಮಾಹುತಿ ದಳದ ವರು ಸಂಚು ರೂಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಬಿಜೆಪಿ ಜಿಲ್ಲಾ ಎಸ್.ಸಿ.ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು ಒತ್ತಾಯಿಸಿ ದ್ದಾರೆ.
ಜ.10 ಗುರುವಾರ ಆರ್.ಎಸ್.ಎಸ್.ಮುಖಂಡ ಡಾ ಭಟ್ ಸಹಿತ ಇಬ್ಬರು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ಮಾಹಿತಿ ಯಂತೆ ಹೆಚ್ಚಿನ ನಿಗಾ ವಹಿಸಲಾಗಿತ್ತು.
ಡಾ| ಭಟ್ ಅವರು ಬೆಂಗಳೂರು ಕಾರ್ಯ ಕ್ರಮವೊಂದಕ್ಕೆ ಕಾರಿನಲ್ಲಿ ತೆರಳುತ್ತಾರೆ ಎಂಬ ಮಾಹಿತಿ ಯನ್ನು ಅರಿತ ಪೋಲೀಸರು ಏಕಾಏಕಿ ಭಟ್ ಅವರನ್ನು ಹೆಚ್ಚಿನ ಪೋಲೀಸ್ ಭದ್ರತೆಯ ಮೇಲೆ ವಿಮಾನದ ಮೂಲಕ ಬೆಂಗಳೂರಿಗೆ ತಲುಪಿಸಿದ್ದಾರೆ. ಅ ಬಳಿಕ ಇವರ ಹತ್ಯೆ ಗೆ ಸಂಚು ರೂಪಿಸಿದವರ ಬಂಧನ ವಾಗಿದೆಯೆ ಅಥವಾ ಯಾವಕ್ರಮಕೈಗೊಂಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ, ಹಾಗಾಗಿ ಇಂತಹ ಯಾವುದೇ ರೀತಿಯ ಘಟನೆಗಳಿಗೆ ರಾಜ್ಯ ಸರಕಾರ ಅವಕಾಶ ನೀಡಬಾರದು.
ಆತ್ಮಾಹುತಿ ದಾಳಿ ನಡೆಸುವಂತಹ ಆರೋಪಿ ಗಳಿಗೆ ರಾಜ್ಯಕ್ಕೆ ನುಸುಳಲು ಅವಕಾಶ ನೀಡಬಾರದು.
ಜೊತೆಗೆ ಇವರಿಗೆ ಪೋಲೀಸ್ ಭದ್ರತೆ ನೀಡಬೇಕು ಎಂದು ಅವರು ರಾಜ್ಯ ಸರಕಾರ ಕ್ಕೆ ಈ ಮೂಲಕ ಒತ್ತಾಯ ಮಾಡಿದ್ದಾರೆ.‌
ಸ್ವತಃ ಗುಪ್ತ ಚರ ಇಲಾಖೆಯ ನ್ನು ಹೊಂದಿರುವ ಮುಖ್ಯಮಂತ್ರಿಗಳು ಪ್ರಕರಣದ ಗಂಭೀರತೆಯನ್ನು ಅರಿತು , ಅಧುನಿಕ ತಂತ್ರಜ್ಞಾನ ಬಳಸಿ , ಆತ್ಮಾಹುತಿ ದಾಳಿ ಯ ಸಂಚಿನ‌ ಮೂಲವನ್ನು ಕ್ರೋಡೀಕರಿಸಿ ಸಂಬಂಧಿಸಿದ ವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಷ್ಟ್ರ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಸಾಮಾರ್ಥ್ಯ ನಮ್ಮ ಇಲಾಖೆ ಗಳಿಗಿದೆ. ಆದರೆ ದೇಶದ ಒಳಗಿದ್ದು ಈ‌ ರೀತಿಯ ಕಾರ್ಯಗಳಿಗೆ ಕುಮ್ಮಕ್ಕು ನೀಡುವ ಭಯೋತ್ಪಾದಕ ರನ್ನು ನಿಗ್ರಹಿಸುವುದು ದೊಡ್ಡ ಸವಾಲಾಗಿದೆ. ರಾಜ್ಯ ಸರಕಾರ ಈ ವಿಚಾರದ ಲ್ಲಿ ತುಷ್ಟೀಕರಣ ನೀತಿಯನ್ನು ಬದಿಗಿಟ್ಟು ಮತೀಯ ವಾದಿ ಶಕ್ತಿಯನ್ನು ಕಠಿಣ ಕ್ರಮದ ಮೂಲಕ ಹತ್ತಿಕ್ಕುವಂತೆ ಮತ್ತು ಭಯೋತ್ಪಾದನೆ ಮಟ್ಟ ಹಾಕಲು
ಅಮ್ಟೂರು ಅಗ್ರಹಿಸಿದ್ದಾರೆ.‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here