Friday, October 20, 2023

IFF ಬೈಶ್, ಜಿಝಾನ್ ಘಟಕದ ವತಿಯಿಂದ ” ಬೈಶ್ ಕ್ರೀಡೋತ್ಸವ”

Must read

ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯಾ ಬೈಶ್ ಘಟಕ ಆಯೋಜಿಸಿದ್ದ ‌” ಫ್ರೆಟರ್ನಿಟಿ ಫೆಸ್ಟ್ 2019″ ರ ಪ್ರಯುಕ್ತ ಬೈಶ್ ಕ್ರೀಡೋತ್ಸವ(Baish sports Fest) ವು ಬೈಶ್ ನ ಫೆನ್ಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

                                                                             

ಸ್ನೇಹಕ್ಕಾಗಿ ಕ್ರೀಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಅನಿವಾಸಿ ಭಾರತೀಯರಿಗಾಗಿ ನಡೆದ ಬೈಶ್ ಕ್ರೀಡೋತ್ಸವದಲ್ಲಿ ಕ್ರಿಕೆಟ್, ವಾಲಿಬಾಲ್, ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಿತು. ಕ್ರೀಡೋತ್ಸವದಲ್ಲಿ ನೂರಾರು ಕ್ರೀಡಾಪಟುಗಳನ್ನೊಳಗೊಂಡ ಒಟ್ಟು 10 ತಂಡಗಳು ಭಾಗವಹಿಸಿದ್ದವು.
ಕ್ರೀಡೋತ್ಸವದ ಚಾಂಪಿಯನ್ ಪಟ್ಟವನ್ನು ಫತೇ ಅಲ್ ಜುನೂಬ್ ತಂಡವು ತನ್ನದಾಗಿಸಿಕೊಂಡಿತು. ಕ್ರೀಡೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುನೈಟೆಡ್ ಟೆಕ್ ಸಂಸ್ಥೆಯ ರಿಯಾಝ್, ಅಬ್ದುಲ್ ಬಶೀರ್ ಕೈಕಂಬ,IFF ಜಿಲ್ಲಾಸಮಿತಿ ಸದಸ್ಯರಾದ ಸಲೀಮ್ ಗುರುವಾಯನಕೆರೆ, ಹಾಗೂ IFF ಬೈಶ್ ಘಟಕದ ಅದ್ಯಕ್ಶರಾದ ರಹಿಮಾನ್ ಪೋರ್ಕೋಡಿ ಉಪಸ್ಥಿತರಿದ್ದರು..

ಕ್ರೀಡೋತ್ಸವು IFF ಅಭಾ/ಜಿಝಾನ್ ವಲಯಾದ್ಯಕ್ಷರಾದ ಇಕ್ಬಾಲ್ ಕೂಳೂರು ಅವರ ಸಮಾರೋಪ ಭಾಷಣದೊಂದಿಗೆ ಕೊನೆಗೊಂಡಿತು.. ಕ್ರೀಡೋತ್ಸವದ ಸಂಚಾಲಕರಾದ ತಂಶೀರ್ ಬಜ್ಪೆಯವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

More articles

Latest article