Monday, April 8, 2024

ತಾಳ್ಮೆ

ಲೇಖನ: ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ಅಧ್ಯಾಪಕರು, ನಂದನ ಕೇಪು
ಮೊ: 9448626093

ತಾಳ್ಮೆಯೇ ಶ್ರೇಯಸ್ಸಿನ ಗುಟ್ಟು; ತಾಳಿದವನು ಬಾಳಿಯಾನು; ತಾಳ್ಮೆಗಿಂತ ಮಿಗಿಲಾದ ಸಂಪತ್ತಿಲ್ಲ………….ಹೀಗೆ ತಾಳ್ಮೆಯನ್ನು ಬೆಂಬಲಿಸುವ ಅನೇಕ ಮಾತುಗಳಿವೆ. ತಾಳ್ಮೆಗೆಟ್ಟವನ ಬದುಕು ಹಂದಿಯ ಬದುಕಿಗಿಂತ ಹೇಯವೆನ್ನುವರು. ಕೆಲವರು ತಮ್ಮ ಮಾತುಗಳನ್ನು ಎತ್ತರಿಸುತ್ತಾ ನನ್ನ ತಾಳ್ಮೆಗೂ ಒಂದು ಮಿತಿಯಿದೆ, ತಾಳ್ಮೆ ತಪ್ಪಿದರೆ ನಾನು ಮನುಷ್ಯನೇ ಅಲ್ಲ, ತಾಳ್ಮೆ ತಪ್ಪಿದರೆ ನಾನು ಏನು ಅಂತ ತೋರಿಸುತ್ತೇನೆ ಎಂದೆಲ್ಲಾ ಹೇಳುತ್ತ ಬೊಬ್ಬಿಡುವುದನ್ನು ಅಲ್ಲಲ್ಲಿ ಆಗಾಗ ಕಾಣುತ್ತೇವೆ.

ನಿಜವಾಗಿಯೂ ತಾಳ್ಮೆ ತಪ್ಪಿದವನು ಮನುಷ್ಯನಾಗುವುದು ಅಸಾಧ್ಯವೇ ಸರಿ. ಅವನು ಮೃಗಕ್ಕೂ ಕಡೆಯೆಂದು ಹೇಳಿದರೆ ನಾವು ಮೃಗಗಳ ತೇಜೋವಧೆ ಮಾಡಿದಂತಾಗುತ್ತದೆ. ಯಾಕೆಂದರೆ ತಾಳ್ಮೆ ತಪ್ಪಿದವನು ಅತ್ಯಂತ ಕೀಳು ಮಟ್ಟಕ್ಕೆ ಇಳಿಯುತ್ತಾನೆ. ವ್ಯಕ್ತಿಯ ನಿಜವಾದ ಬಣ್ಣ ಬಯಲಾಗುವುದು ಅವನು ತಾಳ್ಮೆ ತಪ್ಪಿದಾಗಲೇ ಎಂಬುದು ಸರಿಯಷ್ಟೆ?

ತಲ್ಲಣಿಸದಿರು ಕಂಡ್ಯ ತಾಳು ಮನವೇ ದಾಸವರೇಣ್ಯರು ಆಡಿದ ಈ ನೀತಿಭರಿತವಾದ ಮಾತು ಇಂದಿಗೂ ಸಾರ್ವಭೌಮ ನುಡಿಯಾಗಿದೆ. ತಲ್ಲಣಿಸುವ ಮನಸು ತಾಳ್ಮೆಗೆಡುವುದು ಸಹಜ. ತಾಳ್ಮೆಯ ಕೆರೆ ಕಡಿದರೆ ಅದನ್ನು ಹಿಡಿದಿಡಲು ಎಲ್ಲರೂ ಅಸಮರ್ಥರು. ಅದಕ್ಕಾಗಿ ನಮ್ಮಲ್ಲಿ ತಾಳ್ಮೆ ಬೇಕು. ತಾಳ್ಮೆಯಿಲ್ಲದವನು ವಾಹನ ಚಲಾಯಿಸಲಾರ, ತರಗತಿಯಲ್ಲಿ ಬೋಧಿಸಲಾರ, ನ್ಯಾಯಾಲಯದಲ್ಲಿ ವಾದಿಸಲಾರ. ಯಾವುದೇ ಯಶಸ್ವೀ ಕೆಲಸಗಾರನಲ್ಲಿ ತಾಳ್ಮೆ ಅತೀ ಅಗತ್ಯ. ಗಿಡ ನೆಟ್ಟು ಬೆಳೆದು ಫಲ ನೀಡುವಂತಾಗಲು ವರ್ಷಾನುಗಟ್ಟಲೆ ತಾಳ್ಮೆಯಿಂದ ಕಾಯಬೇಕು. ತಾಳ್ಮೆಯಿಂದ ಕಾಯದೆ ತಕ್ಷಣ ಫಲ ನಿರೀಕ್ಷೆ ಮಾಡುವವರಿಗೆ ಫಲ ದೊರೆಯದು. ದಿನಕ್ಕೊಂದು ಚಿನ್ನದ ಮೊಟ್ಟೆ ಕೊಡುತ್ತಿದ್ದ ಕೋಳಿಯಿಂದ ಒಮ್ಮಲೇ ಮೊಟ್ಟೆ ಪಡೆದು ಶ್ರೀಮಂತನಾಗಲು ಹೊರಟ ತಿಳಿಗೇಡಿಯ ಕಥೆಯು ನಮ್ಮನ್ನು ತಾಳ್ಮೆ ಕೆಡದಂತೆ ಎಚ್ಚರಿಸುತ್ತದೆ.

ಮನೆಯೊಡತಿಯೊಬ್ಬಳು ಮುದ್ದಿನಿಂದ ಸಾಕಿದ ಮುಂಗುಸಿಯು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತೊಟ್ಟಿಲಿನಲ್ಲಿದ್ದ ಹಸುಳೆಯನ್ನು ಕಡಿಯಲು ಬಂದ ಹಾವನ್ನು ಕೊಂದು ಮಗುವನ್ನು ರಕ್ಷಿಸಿತು. ಮುಂಗುಸಿಯ ಬಾಯಿಯ ಸುತ್ತ ರಕ್ತದ ಕಲೆಯನ್ನು ನೋಡಿದ, ಆಗ ತಾನೇ ಆಗಮಿಸಿದ ಮನೆಯೊಡತಿಯು; ಮುಂಗುಸಿಯು ಮಗುವನ್ನು ಘಾಸಿಗೊಳಿಸಿತೆಂದು ಸಿಟ್ಟಿಗೆದ್ದು ತನ್ನ ಸೊಂಟದಲ್ಲಿದ್ದ ನೀರ ಕೊಡವನ್ನು ಅದರ ಮೇಲೆಸೆದು ಮುಂಗುಸಿಯನ್ನು ಕೊಂದೇ ಬಿಟ್ಟಳು. ತೊಟ್ಟಿಲ ಬಳಿಗೆ ಓಡಿದ ಅವಳು ನಿಜವನ್ನು ತಿಳಿದಾಗ ಕಾಲ ಮಿಂಚಿತ್ತು. ತಾಳ್ಮೆಗೆಟ್ಟು ಮಾಡಿದ ಅನರ್ಥದ ಪರಿಣಾಮಗಳಿಗೆ ಪರಿಹಾರವನ್ನು ಮಾಡಲು ಅವಳಿಗೆ ಸಾಧ್ಯವೇ ಇರಲಿಲ್ಲ. ತಾನು ಕೊಂದ ಮುಂಗುಸಿಗೆ ಮರುಜನ್ಮ ನೀಡಲು ಅವಳಿಂದ ಸಾಧ್ಯವಿಲ್ಲ. ಆದುದರಿಂದ ನಾವು ನಮ್ಮ ಮನಸ್ಸನ್ನು ತಾಳ್ಮೆಯ ವಶಕ್ಕೆ ಒಪ್ಪಿಸೋಣ, ತಾಳ್ಮೆ ಕೆಟ್ಟು ಅನಾಹುತಗಳನ್ನು ಮಾಡದಿರೋಣ.

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....