ಭಾರತೀಯ ಕಾಫಿ ತೋಟದ ಬಹುಭಾಗ ಸೂರ್ಯನ ನೇರ ಕಿರಣಗಳು ಬೀಳದೆ ನೆರಳಿನಲ್ಲೇ ಬೆಳೆಯುತ್ತಿದ್ದು ಉತ್ಕೃಷ್ಟ ಗುಣ ಮಟ್ಟದ್ದಾಗಿದೆ. ಭಾರತದ ಕಾಫಿ ಉತ್ಪನ್ನದಲ್ಲಿ ಶೇಕಡಾ 70ರಷ್ಟನ್ನು ಕರ್ನಟಕವೇ ಪೂರೈಸುತ್ತದೆ ಎಂಬುದು ನಮ್ಮ ಹೆಗ್ಗಳಿಕೆ. ಅಮೇರಿಕನ್ನರು ಆಮ್ಲೀಯ ಗುಣ ಹೊಂದಿದ ಆಫ್ರಿಕನ್ ಮತ್ತು ದಕ್ಷಿಣ ಅಮೇರಿಕನ್ ಕಾಫಿಯನ್ನು ಬಳಸಿದರೆ, ಯೂರೋಪ್ ದೇಶದಲ್ಲಿ ಆಮ್ಲ ರಹಿತ ಭಾರತದ ಸವಿಯಾದ ಕಾಫಿಗೆ ಭಾರೀ ಮನ್ನಣೆ ಮತ್ತು ಬೇಡಿಕೆಯಿದ್ದು, ಎಸ್ಪ್ರೆಸ್ಸೋ ಕಾಫಿಯಲ್ಲಿ ನಮ್ಮ ಕಾಫಿ ಅಗಾಧ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.
ಕಾಫಿಯ ಪ್ರಖ್ಯಾತ ತಳಿಗಳೆಂದರೆ, ಅರೇಬಿಕಾ ಮತ್ತು ರೊಬುಸ್ಟಾ. ಮೊದಲನೆಯದನ್ನು 17ನೇ ಶತಮಾನದಿಂದಲೇ ಕರ್ನಾಟಕದ ಬಾಬಾಬುಡನ್ಗಿರಿ ಪರ್ವತಾವಳಿಯಲ್ಲಿ ಬೆಳೆಸಲಾಗುತ್ತಿದ್ದು, ಕೆಂಟ್ ಮತ್ತು ಎಸ್.795 ಎಂಬ ಬ್ರಾಂಡ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಾಫಿ ತೋಟಗಾರಿಕೆಗೆ ದೀರ್ಘವಾದ ಇತಿಹಾಸವಿದ್ದು ಇಥಿಯೋಪಿಯಾ ಮತ್ತು ಅರೇಬಿಯಾಗಳು ಕ್ರಮವಾಗಿ ಈ ಉದ್ಯಮದಲ್ಲಿ ಮಂಚೂಣಿಯಲ್ಲಿವೆ. ಪ್ಯಾರಿಸ್ನಲ್ಲಿರುವ Bibliotheque Nationale ದಾಖಲೆಗಳ ಪ್ರಕಾರ ಕ್ರಿ.ಶ. 875ರ ತನಕದ ಕಾಫಿಯ ಇತಿಹಾಸ ಇಥಿಯೋಪಿಯಾದಿಂದ ಆರಂಭಗೊಂಡಿದ್ದು 15ನೇ ಶತಮಾನದಲ್ಲಿ ಅರೇಬಿಯಾವನ್ನು ಪ್ರವೇಶಿಸಿತು.


ಕಾಫಿಯ ಭಾರತ ಪ್ರವೇಶ ಬಾಬಾ ಬುಡಾನ್ ಎಂಬ ಭಾರತೀಯ ಸಂತನಿಂದಾಯಿತು. ಆತ ಮೆಕ್ಕಾ ತೀರ್ಥಯಾತ್ರೆಯಿಂದ ಮರಳುವಾಗ ತನ್ನ ಗಡ್ಡದೆಡೆಯಲ್ಲಿ ಅಡಗಿಸಿ ಏಳು ಕಾಫಿ ಬೀಜಗಳನ್ನು ಮೈಸೂರಿಗೆ ತಂದನು. ಆ ಬೀಜಗಳನ್ನು ಚಿಕ್ಕಮಂಗಳೂರು ಜಿಲ್ಲೆಯ ಚಂದ್ರಗಿರಿಯಲ್ಲಿ ಬಿತ್ತಿದನು. ಅದೇ ಚಂದ್ರಗಿರಿಗೆ ಸಂತನಿಂದಾಗಿ ಬಾಬಾ ಬುಡಾನ್ ಗಿರಿ ಹೆಸರಾಯಿತು. ಅರೇಬಿಯಾದಿಂದ ಹಸಿ ಕಾಫಿ ಬೀಜಗಳನ್ನು ಹೊರದೇಶಗಳಿಗೊಯ್ಯುವುದು ಕಾನೂನು ಬಾಹಿರವಾಗಿತ್ತು. ಇಸ್ಲಾಮಿನಲ್ಲಿ ಏಳು ವಿಶೇಷ ಸಂಖ್ಯೆಯಾಗಿದ್ದು ಕಾಫಿ ಬೀಜಗಳನ್ನು ಧರ್ಮದ ಉದ್ದೇಶದಿಂದ ಒಯ್ಯಲಾಗಿದೆಯೆಂದು ಪರಿಗಣಿಸಲಾಯಿತು. ಹೀಗೆ ಅಂದಿನ ಮೈಸೂರು ರಾಜ್ಯ, ಇಂದಿನ ಕನರ್ಾಟಕದ ಬಹು ಭಾಗಗಳ ಮೂಲಕ ಕಾಫಿ ಉದ್ಯಮ ಭಾರತದಲ್ಲಿ ಆರಂಭಗೊಂಡಿತು. ಕಾಫಿ ಬೀಜಗಳನ್ನು ಹುರಿಯದೆ ಯಾ ಬೇಯಿಸದೆ ಇತರ ದೇಶಗಳಿಗೆ ರಫ್ತು ಮಾಡಲು ನಿರ್ಬಂಧವಿದ್ದಾಗ್ಯೂ ಬಾಬಾ ಬುಡಾನ್ ಅರಬ್ ದೇಶದಿಂದ ಕಾಫಿಯ ತಳಿಗಾಗಿ ಬೀಜಗಳನ್ನು ತಂದಿರುವುದು ಆತನ ದೊಡ್ಡ ಸಾಹಸವೆಂದೇ ಹೇಳಬೇಕು.
ಅರೇಬಿಕಾ ಕಾಫಿ ಪ್ರಖ್ಯಾತವಾಗಿತ್ತು. ಆದರೆ ಈ ತಳಿಗೆ ಕೊಳೆ ರೋಗ ಬಂದ ಕಾರಣ ರೋಬುಸ್ಟ್ ಎಂಬ ಪರ್ಯಾಯ ತಳಿಯನ್ನು ಬೆಳೆಸಲಾರಂಭಿಸಲಾಯಿತು. ಲಿಬಿರಿಕಾ ಮತ್ತು ಅರೇಬಿಕಾ ತಳಿಗಳನ್ನು ಕರಣಗೊಳಿಸಿ ಕೊಳೆ ರೋಗ ನಿರೋಧ ಶಕ್ತಿಯಿರುವ ಅರೇಬಿಕಾ ಕಾಫಿ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ಇಂದಿಗೂ ದೇಶದ ಅಗತ್ಯದ ಶೇಕಡಾ 70ರಷ್ಟು ಕಾಫಿಯನ್ನು ಇದೇ ತಳಿಯನ್ನು ಬಳಸಿ ಉತ್ಪಾದಿಸಲಾಗುತ್ತಿದೆ.

Ramesh m bayar

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here