Thursday, September 28, 2023

ನಗದು ಕಳವು ಮಾಡಿದ ಆರೋಪಿ ಯನ್ನು ಬಂಧಿಸಿದ ಪುತ್ತೂರು ಪೋಲೀಸರು

Must read

ಪುತ್ತೂರು: ಕಬಕದಲ್ಲಿ ಹಾಡುಹಗಲೇ ಅಂಗಡಿಯಿಂದ ಸಾವಿರಾರು ರೂ ನಗದು ಕಳವು ಮಾಡಿದ ಆರೋಪಿ ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪುತ್ತೂರು ಪೋಲೀಸರು.
ಇಳಂತಿಲ ಗ್ರಾಮದ ನೇಜಿಕಾರು ನಿವಾಸಿ ದಿ! ಹಸನಬ್ಬ ಅವರ ಪುತ್ರ ಮಹಮ್ಮದ್ ಶಾಫಿ ( 27) ಬಂಧಿತ ಆರೋಪಿ.
ಈತನ ವಿರುದ್ದ ಉರುವ ಪೋಲೀಸ್ ಠಾಣೆಯ ಲ್ಲಿ ದರೋಡೆ ಪ್ರಕರಣ ದಾಖಲಾಗಿ ಬಂಧಿತ ನಾಗಿದ್ದ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಬಿಡುಗಡೆಗೊಂಡಿದ್ದ.
ಕಬಕ ದಲ್ಲಿ ಗೋಪಾಲಕೃಷ್ಣ ರೈ ಅವರ ಪುತ್ತೂರು ಟಯರ್ಸ್ ಎಂಬ ಅಂಗಡಿಯಿಂದ ಈತ ಮಧ್ಯಾಹ್ನ2 ಗಂಟೆಯ ವೇಳೆ ಕಳವು ನಡೆಸಿದ್ದ.
ಮಾಲಕ ಗೋಪಾಲಕೃಷ್ಣ ರೈ ಅವರು ಅಂಗಡಿಯೊಳಗೆ ಸಾಮಾನು ತರಲೆಂದು ಹೋದ ವೇಳೆ ಕಾದು ಕುಳಿತಿದ್ದ ಈತ ಕ್ಯಾಸ್ ಕೌಂಟರ್ ನಲ್ಲಿದ್ದ 23 ಸಾವಿರ ರೂ ಯನ್ನು ಕದ್ದುಕೊಂಡು ಹೋಗಿದ್ದ.

ಸಾರ್ವಜನಿಕ ಮಾಹಿತಿ ಹಾಗೂ ಸಿ.ಸಿ.ಕ್ಯಾಮರಾ ಪೂಟೇಜ್ ಪಡೆದ ಪೋಲೀಸರು ಆರೋಪಿ ಯ ಬಂಧನ ಮಾಡಲು ಯಶಸ್ವಿಯಾಗಿ ದ್ದಾರೆ

ಪುತ್ತೂರು ನಗರ ಠಾಣಾ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನ ದಲ್ಲಿ ಪಿ.ಎಸ್.ಐ.ರುಕ್ಮಯ ಮೂಲ್ಯ ಮತ್ತು ಸಿಬ್ಬಂದಿ ಗಳು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

More articles

Latest article