Sunday, October 22, 2023

ಶ್ರೀರಾಮ ಪದವಿ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Must read

ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2018-19ನೇ ಸಾಲಿನ ಪ್ರತಾಪ ಕ್ರೀಡಾ ಸಂಘದ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಉದ್ಘಾಟಿಸಿ ಶಾರೀರಿಕ ಶಿಕ್ಷಣ ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತವಲ್ಲದೆ ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸುವುದರಿಂದ ಶಾರೀರಿಕ ದೃಢತೆಯನ್ನು ಹೆಚ್ಚಿಸಲು ಸಾಧ್ಯ. ಶಾರೀರಿಕ ದೃಢತೆಯಿಂದ ಮನಸ್ಸು ದೃಢಗೊಂಡು ಈ ದೃಢತೆ ಕಲಿಕೆಗೆ ಪೂರಕವಾಗಲಿದೆ. ಮಕರ ಸಂಕ್ರಾಂತಿಯ ಈ ಪುಣ್ಯ ದಿನದಿಂದ ಕತ್ತಲೆಯ ಅವಧಿ ಕಡಿಮೆಯಾಗಿ ಬೆಳಕಿನ ಅವಧಿ ದೀರ್ಘವಾಗುವುದರಿಂದ ಹಾಗೂ ಇವೆಲ್ಲದಕ್ಕೂ ಕಾರಣಕರ್ತನಾದ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನವಾದ್ದರಿಂದ ಶಾರೀರಿಕ ಚಟುವಟಿಕೆಗಳಿಗೆ ಶ್ರೇಷ್ಠವಾದ ದಿನ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಹಾಗೂ ಹಿರಿಯ ಕ್ರೀಡಾ ಶಿಕ್ಷಕ ಗಂಗಾಧರ ರೈ ಮಾಣಿ ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕ್ರೀಡಾಸಂಘದ ಅಧ್ಯಕ್ಷ ಮಂಜುನಾಥ ಕ್ರೀಡಾಪಟುಗಳಿಗೆ ಕ್ರೀಡಾಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ಭಾ.ಜ.ಪ.ದ ಯುವ ಮೋರ್ಚಾ ಗೋಳ್ತಮಜಲು ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಹಾಗೂ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಪತ್ ಕುಮಾರ್, ವಿಟ್ಲ ಪ್ರಖಂಡದ ಭಜರಂಗದಳದ ಸಂಚಾಲಕ ಅಕ್ಷಯ, ಪದವಿ ಪ್ರಾಚಾರ್ಯ ಕೃಪ್ಣಪ್ರಸಾದ್ ಕಾಯರ್‌ಕಟ್ಟೆ ಹಾಗೂ ಕ್ರೀಡಾಸಂಘದ ನಿರ್ದೇಶಕ ಶಶಿಕುಮಾರ್ ಉಪಸ್ಥಿತರಿದ್ದರು.

ಕ್ರೀಡಾಜ್ಯೋತಿಯನ್ನು ಅಂತರ್ ಕಾಲೇಜು ಅಥ್ಲೆಟಿಕ್ ಮೀಟ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಾದ ದೀಕ್ಷಿತಾ, ಶೃತಿ, ಅಭಿಷೇಕ್ ಮತ್ತು ಮಂಜುನಾಥ ಇವರುಗಳು ಕಲ್ಲಡ್ಕ ಶ್ರೀರಾಮ ಮಂದಿರದಿಂದ ತಂದು ಉದ್ಘಾಟಕರಿಗೆ ಹಸ್ತಾಂತರಿಸಿದರು.
ವಿದ್ಯಾರ್ಥಿಗಳಾದ ಕಿಶೋರ್ ಸ್ವಾಗತಿಸಿ, ಗಣೇಶ ವಂದಿಸಿ, ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.

More articles

Latest article