ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮನವಿ
ಮುಂಬಯಿ (ದುಬಾಯಿ): ಗಲ್ಫ್ ರಾಷ್ಟ್ರಗಳಿಂದ ಕೆಲಸ ಕಳಕೊಂಡು ಹಾಗೂ ಇನ್ನಿತರ ಕಾರಣಗಳಿಂದ ತಾಯ್ನಾಡಿಗೆ ಹಿಂತಿರುಗಿ ಬರುವ ಅನಿವಾಸಿ ಕನ್ನಡಿಗರ ಭವಿಷ್ಯತ್ತಿನ ಜೀವನಕ್ಕೆ ದಾರಿ ಕಾಣಲು ಬೇಕಾದ ಸಹಾಯ ಕರ್ನಾಟಕ ರಾಜ್ಯ ಸರ್ಕಾರ ಮಾಡಬೇಕಾದದ್ದು ಸರಕಾರದ ಕರ್ತವ್ಯ ಮತ್ತು ಜವಾಬ್ದಾರಿಕೆ ಎಂದು ಹೆಸರಾಂತ ಕನ್ನಡಪರ ಸಾಮಾಜಿಕ ಕಾರ್ಯಕರ್ತ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕರ್ನಾಟಕ ಎನ್‌ಆರ್‌ಐ ಫೋರಂ-ಯುಎಇ) ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಹೇಳಿದರು.



ದುಬಾಯಿನಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ತೀವ್ರವಾಗಿ ಪ್ರತಿಕ್ರ್ರಿಯಿಸಿದ ಅವರು ಹೊಸ ಸರಕಾರ ಬಂದು ಹತ್ತು ತಿಂಗಳು ಆದರೂ ಇದುವರೆಗೆ ರಾಜ್ಯದ ಎನ್‌ಆರ್‌ಐ ನಿಗಮದ ಉಪಾಧ್ಯಕ್ಷರನ್ನು ಕೂಡ ನೇಮಕ ಮಾಡದೆ ಅನಿವಾಸಿಗರನ್ನು ಕಡೆಗಣಿಸಿರೋದು ನಿಜಕೂ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ಇನಿತರ ರಾಜ್ಯಗಳು ಎಲ್ಲಾ ಸಹಾಯ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಮಂಗಳೂರಿಗೆ ಸೇವೆ ನೀಡುತಿದ್ದ ಖಾಸಾಕಿ ವಿಮಾನಯಾನ ಸೇವೆ ಈಗಾಗಲೇ ಸೇವೆ ನಿಲ್ಲಿಸುವುದರ ಮೂಲಕ ಅಲ್ಲಿಗೆ ಪಯಣಿಸುವ ಅನಿವಾಸಿಗರನ್ನು ಏರ್ ಇಂಡಿಯಾ ಟಿಕೆಟ್ ದರದಲ್ಲೂ ಕೊಳ್ಳೆ ಹೊಡಿಯುತಿದೆ ಈ ಬಗ್ಗೆ ಯಾವ ಸಂಸದರು ತುಟಿ ಬಿಚ್ಚುತ್ತಿಲ್ಲ. ಇಂತಹ ಮಲತಾಯಿ ಧೋರಣೆ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಅನಿವಾಸಿಗರು ಮುಂದಾಗ ಬೇಕಾಗುವ ದಿನಗಳು ದೂರವಿಲ್ಲ. ತಾಯಿನಾಡಿಗೆ ಹಿಂತಿರುಗಿ ಬಂದು ತಮ್ಮ ಜೀವನ ಮುಂದುವರಿಸಲು ದಾರಿ ಕಾಣದೆ ಒಬ್ಬನಾದರೂ ಏನಾದರೂ ಹೆಚ್ಚುಕಡಿಮೆ ಮಾಡಿಕೊಂಡಲ್ಲಿ ರಾಜ್ಯಸರಕಾರವೇ ನೇರಹೊಣೆ ಹೊರ ಬೇಕಾದಿತು ಎಂದು ಅಂಬಲತೆರೆ ಸರ್ಕಾರಕೆ ಎಚ್ಚರಿಕೆ ನೀಡಿದರು . ಇನ್ನಾದರೂ ಆಡಳಿತ ಸರಕಾರ ತಿಳಿದು ಕೊಂಡರೆ ಒಳಿತು. ಅನಿವಾಸಿಗರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಕ್ಕೂ ಒಂದೇ ನೆಲವು ಎಂಬುದು ಈವರೆಗೆ ಅನಿವಾಸಿಗರಾದ ನಮ್ಮ ಅನುಭವ. ಈ ಅನ್ಯಾಯದ ವಿರುದ್ಧ ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಕನ್ನಡಪರ ಅನಿವಾಸಿ ಸಂಘಟನೆಗಳು ಪ್ರತಿಕ್ರಯಿಸಬೇಕು ಎಂದು ಪ್ರಭಾಕರ್ ಅಂಬಲತೆರೆ ವಿನಂತಿದ್ದಾರೆ.