ಅಳಿಕೆ: ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಚಂದ್ರಶೇಖರ ಪಿ. ಧ್ವಜಾರೋಹಣ ಮಾಡಿದರು. ಭಜನೆ ಕಾರ್‍ಯಕ್ರಮದ ಬಳಿಕ ನಡೆದ ಸಭಾ ಕಾರ್‍ಯಕ್ರಮದಲ್ಲಿ ಚಂದ್ರಶೇಖರ ಪಿ. ಗಣರಾಜ್ಯೋತ್ಸವದ ಪ್ರಾಮುಖ್ಯತೆಯನ್ನು ವಿವರಿಸಿದರು.
ವಿದ್ಯಾಕೇಂದ್ರದ ಪ್ರಿನ್ಸಿಪಾಲ್ ಶಿವಕುಮಾರ್ ಎಂ. ಮಾತನಾಡಿದರು. ಹತ್ತನೆಯ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಸ್ವಾಗತಿಸಿದರು. ಸಂಕೇತ್ ವಂದಿಸಿದರು. ಆದಿತ್ಯ ಸುಮನ್ ಕಾರ್‍ಯಕ್ರಮ ನಿರೂಪಿಸಿದರು.

ಬೊಳಂತಿಮೊಗರು: ಇಲ್ಲಿನ ಸರಕಾರಿ .ಹಿ .ಪ್ರಾ .ಶಾಲೆ (ಕನ್ನಡ) ಇಲ್ಲಿ ೭೦ ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರೌಢಶಾಲಾ ಎಸ್‌ಡಿಎಂಸಿ ಕಾರ್‍ಯಾಧ್ಯಕ್ಷರಾದ ಜಗದೀಶ್ಚಂದ್ರ ಗೌಡ ನಾಯ್ತೊಟ್ಟು ಧ್ವಜಾರೋಹಣಗೈದರು. ಪ್ರಾಥಮಿಕ ವಿಭಾಗದ ಅಧ್ಯಕ್ಷರಾದ ವಿಶ್ವನಾಥ ನಾಯ್ತೊಟ್ಟು ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವನಿತಾ ಮಾಮೇಶ್ವರ ಹಾಗೂ ಸದಸ್ಯರಾದ ರೇವತಿ ಕೊಡಿಮಜಲು, ಬಬಿತಾ ಅವರು ಉಪಸ್ಥಿತರಿದ್ದರು.
ಆಂಜನೇಯ ಆಲದಕಟ್ಟಿ ಅವರು ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು ರಾಮಣ್ಣ ಗೌಡರು ರಾಜ್ಯೋತ್ಸವದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕರಾದ ಸಂಜೀವ ,ಎಚ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕರಾದ ಅನಿಲ್ ವಡಗೇರಿ ವಂದಿಸಿದರು. ಕೇಶವಯ್ಯ ಕಾರ್‍ಯಕ್ರಮ ನಿರೂಪಿಸಿದರು.

ಕುದ್ದುಪದವು ಆಶ್ರಮಶಾಲೆ: ಕುದ್ದುಪದವು ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಸತ್ಯನಾರಾಯಣ ಭಟ್ ಬಿ. ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು, ಅದರ ಮೌಲ್ಯಗಳನ್ನು ಗೌರವಿಸೋಣ, ಬಲಪಡಿಸೋಣ. ಸಂವಿಧಾನದತ್ತವಾದ ಹಕ್ಕುಗಳನ್ನು ಅನುಭವಿಸುವ ಜೊತೆಗೆ ನಮ್ಮ ಕರ್ತವ್ಯಗಳನ್ನೂ ಪಾಲಿಸುವ ಜವಾಬ್ದಾರಿಯುತ ಪ್ರಜೆಗಳಾಗೋಣ ಎಂದರು.
ಶಾಲಾ ಶಿಕ್ಷಕಿ ಭವ್ಯ ಪಿ. ಸ್ವಾಗತಿಸಿದರು. ಶಿಕ್ಷಕಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕಿ ತುಳಸಿ ಎನ್. ಕಾರ್‍ಯಕ್ರಮನಿರೂಪಿಸಿದರು. ಶಿಕ್ಷಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು, ಹೆತ್ತವರು ಉಪಸ್ಥಿತರಿದ್ದರು.

ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ ನೆರವೇರಿಸಿದರು. ಮುಖ್ಯ ಶಿಕ್ಷಕಿ ಪುಷ್ಪಾ, ಸಹಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here