Thursday, October 26, 2023

ಆಲಡ್ಕದಲ್ಲಿ ಬುರ್‍ದಾ ಮಜ್ಲಿಸ್ ಹಾಗೂ ನಅತೇ ಶರೀಫ್ ಕಾರ್ಯಕ್ರಮ

Must read

ಬಂಟ್ವಾಳ: ದೇಶದ ಬಹು ಸಂಸ್ಕøತಿಯ ಉಳಿವಿಗೆ ಬದ್ದರಾಗುವ ಮೂಲಕ ನಾವೆಲ್ಲರೂ ಜಾತ್ಯಾತೀತ ಚಳುವಳಿಗೆ ಮುನ್ನುಗ್ಗುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಬೋಗೋಡಿ-ಪಾಣೆಮಂಗಳೂರು ಇದರ ಐದನೇ ವಾರ್ಷಿಕೋತ್ಸವ ಪ್ರಯುಕ್ತ ಆಲಡ್ಕ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಬುರ್‍ದಾ ಮಜ್ಲಿಸ್ ಹಾಗೂ ನಅತೇ ಶರೀಫ್ ಕಾರ್ಯಕ್ರಮದಲ್ಲಿ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಧರ್ಮಗಳು ಸರ್ವ ಜನರ ಸುಖವನ್ನು ಬಯಸುತ್ತದೆ. ಯಾವುದೇ ಒಂದು ವರ್ಗಕ್ಕೆ ಸೀಮಿತಗೊಂಡು ಯಾವುದೇ ಧರ್ಮ ಸುಖ ಬಯಸುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಲಡ್ಕ ಎಂಜೆ ಎಂ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಮಾತನಾಡಿ ಯುವಕರು ಯಾವುದೇ ಕಾರಣಕ್ಕೂ ದುಡುಕಬಾರದು. ಪರಸ್ಪರ ಸಮಾಲೋಚನೆ ನಡೆಸುವ ಮೂಲಕ ಸೌಹಾರ್ದತೆ ಆದ್ಯತೆ ನೀಡಬೇಕಾಗಿದೆ. ದ್ವೇಷ ಅಸೂಯೆ, ಕೋಪ, ಮುಂಗೋಪಗಳಿಂದ ಯುವಕರು ದೂರವಾಗಿರಬೇಕು ಎಂದು ಕರೆ ನೀಡಿದರಲ್ಲದೆ ಸಾಹೋದರ್ಯತೆ ಇದ್ದಾಗ ಸಂಘಟನೆಗಳ ಯಶಸ್ಸು ಸುಲಭ ಸಾಧ್ಯ ಎಂದರು.

ಆಲಡ್ಕ ಬಿಜೆಎಂ ಮುದರ್ರಿಸ್ ಅಶ್ರಫ್ ಸಖಾಫಿ ಸವಣೂರು ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯಿದ್ ಸಲೀಂ ತಂಙಳ್ ಅಸ್ಸಖಾಫ್ ಕೆ.ಸಿ.ರೋಡು ದುವಾಶಿರ್ವಚನಗೈದರು. ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಆಲಡ್ಕ ಎಂಜೆಎಂ ಅಧ್ಯಕ್ಷ ಅಬೂಬಕ್ಕರ್ ತ್ರೀಮೆನ್ಸ್, ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಗುಡ್ಡೆಅಂಗಡಿ ಎನ್‍ಜೆಎಂ ಅಧ್ಯಕ್ಷ ಉಮರುಲ್ ಫಾರೂಕ್, ರೆಂಗೇಲ್ ಬಿಜೆಎಂ ಅಧ್ಯಕ್ಷ ಪಿ.ಆರ್. ಇದ್ದಿನಬ್ಬ, ಮುಹಮ್ಮದ್ ಹನೀಫ್ ಫ್ಯಾಶನ್ ಗೋಲ್ಡ್, ಕರಾವಳಿ ಟೈಮ್ಸ್ ಉಪಸಂಪಾದಕ ಯು. ಮುಸ್ತಫಾ, ಅನ್ಸಾರುಲ್ ಮಸಾಕೀನ್ ಅಧ್ಯಕ್ಷ ಆಸಿಫ್ ಅಬೂಬಕ್ಕರ್, ಫ್ರೆಂಡ್ಸ್ ಎಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಎಸ್‍ವೈಎಸ್ ಪಾಣೆಮಂಗಳೂರು ಡಿವಿಷನ್ ಅಧ್ಯಕ್ಷ ಹೈದರ್ ಅಲಿ, ಅಬ್ದುಲ್ ಖಾದರ್ ಮದನಿ ಬಂಗ್ಲೆಗುಡ್ಡೆ, ಇಬ್ರಾಹಿಂ ಬಾತಿಷಾ ಮುಸ್ಲಿಯಾರ್ ನಂದಾವರ, ಅಬ್ದುಲ್ ರಹಿಮಾನ್ ಸಖಾಫಿ, ಸಿನಾನ್ ಮದನಿ ಮೊದಲಾದವರು ಭಾಗವಹಿಸಿದ್ದರು.
ವಾರಿಸ್ ಅಬ್ದುಲ್ಲಾ ಹುದವಿ ತಾನೂರು ನೇತೃತ್ವದ ರೂಹಿ ಫಿದಾ ಬುರ್‍ದಾ ಆಂಡ್ ಕವ್ವಾಲಿ ಸಂಘಂ ಚೆಮ್ಮಾಡ್ ಇವರಿಂದ ಬುರ್‍ದಾ ಆಲಾಪನೆ ನಡೆಯಿತು. ಮಾಸ್ಟರ್ ಉಮ್ಮರ್ ಸ್ವಲಾಹುದ್ದೀನ್ ದೆಂಜಿಪ್ಪಾಡಿ ಹಾಗೂ ಮಾಸ್ಟರ್ ಸಲ್ಮಾನ್ ಫಾರೀಸ್ ಉಳ್ಳಾಲ ನಅತೇ ಶರೀಫ್ ಹಾಡಿದರು.
ಸಲ್-ಸಬೀಲ್ ಪದಾಧಿಕಾರಿಗಳಾದ ಉಮರ್ ಸಾಬಿತ್ ಬೋಗೋಡಿ, ಸಜ್ಜಾದ್ ಬೋಗೋಡಿ, ರಾಫಿದ್ ಬೋಗೋಡಿ, ಜಾಫರ್ ಬೋಗೋಡಿ, ಶಫೀಯುಲ್ಲಾ ಬೋಗೋಡಿ, ಹಫೀಝ್ ಬೋಗೋಡಿ, ಜಮಾಲ್ ಬಂಗ್ಲೆಗುಡ್ಡೆ, ಕೈಫ್ ಬೋಗೋಡಿ, ನಿಝಾಂ ಬೋಗೋಡಿ, ರಿಫಾತ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಸಾದತ್ ಅಲಿ ದೆಂಜಿಪ್ಪಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಶಿಕ್ ಬೋಗೋಡಿ ಕಿರಾಅತ್ ಪಠಿಸಿದರು. ಅಧ್ಯಕ್ಷ ಮುಹಮ್ಮದ್ ಉಬೈದ್ ಬೋಗೋಡಿ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.

More articles

Latest article