ವಿಟ್ಲ: ಯುವ ಪೀಳಿಗೆಗೆ ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದ ಗುರುಕುಲ ಪದ್ದತಿ ಶಿಕ್ಷಣ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಬುಧವಾರ ನಡೆದ ಬೆಳಿಯೂರುಕಟ್ಟೆ ವೆಂಕಟನಗರ ಸರಕಾರಿ ಪ.ಪೂ.ಕಾಲೇಜು ಮತ್ತು ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾ ಕೇಂದ್ರಗಳ ಜೊತೆ ಊರಿನವರ ಭಾಗವಹಿಸುವಿಕೆ ಕಡಿಮೆಯಾಗಿ, ವಿದ್ಯಾ ಕೇಂದ್ರಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ಕಾಣುತ್ತಿದೆ. ಮೆರಿಟ್ ಶಿಕ್ಷಕರು ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಮೆರಿಟ್ ವಿದ್ಯಾರ್ಥಿಗಳು ಮಾತ್ರ ಇತರ ಶಾಲೆಯಲ್ಲಿದ್ದಾರೆ. ಇದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸರಕಾರಿ ಶಾಲೆಗಳಲ್ಲಿ ಓದಿದವರು ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಯ ಬಗ್ಗೆ ನಿರ್ಲಕ್ಷ ಬೇಡ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಉದ್ಘಾಟಿಸಿದರು. ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆಲವು ವಿದ್ಯಾಭಿಮಾನಿಗಳು ಸ್ಥಾಪಿಸಿದ ದತ್ತಿನಿಧಿ ಬಹುಮಾನ ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಅಧ್ಯಾಪಕರು ನೀಡಿದ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಗೋಪಾಲಕೃಷ್ಣರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಚಿಸಿದ ಪುಸ್ತಕ ’ಜ್ಞಾನ ಸಿರಿ’ ಯನ್ನು ಬಿಡುಗಡೆಗೊಳಿಸಲಾಯಿತು.
ಅತಿಥಿ ಶಿಕ್ಷಕಿ ಹರ್ಷಿತಾ, ಕಾಲೇಜು ವಿಭಾಗದ ಕಚೇರಿ ಸಿಬ್ಬಂದಿ ನವ್ಯ, ಪ್ರೌಢಶಾಲಾ ವಿಭಾಗದ ಕಛೇರಿ ಸಿಬ್ಬಂದಿ ರಚನಾ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳಾದ ಹರಿಣಾಕ್ಷಿ, ಸರಸ್ವತಿ, ಶಾಲಿನಿಯವರನ್ನು ಗೌರವಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಲ್ನಾಡು ಗ್ರಾ.ಪಂ.ಅಧ್ಯಕ್ಷೆ ವಿನಯ ವಸಂತರವರು ಧ್ವಜಾರೋಹಣಗೈದು ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಶಯನಾ ಜಯಾನಂದ, ತಾ.ಪಂ.ಸದಸ್ಯೆ ದಿವ್ಯಾ ಪುರುಷೋತ್ತಮ್, ಗ್ರಾ.ಪಂ.ಅಧ್ಯಕ್ಷೆ ವಿನಯ ವಸಂತ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಸಿಆರ್‌ಪಿ ಶಿವಕುಮಾರ್, ಬಲ್ನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ್ಚಂದ್ರ ಆಳ್ವ, ಬಲ್ನಾಡು ಗ್ರಾ.ಪಂ.ಸದಸ್ಯರಾದ ಎ.ಎಂ.ಪ್ರವೀಣಚಂದ್ರ ಆಳ್ವ, ಇಂದಿರಾ ಎಸ್. ರೈ, ಪ್ರೌಢಶಾಲೆ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್‍ಯಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯ ಜಗನ್ಮೋಹನ ರೈ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವದಾಸ ರೈ ಗುಂಡ್ಯಡ್ಕ, ಅಧ್ಯಕ್ಷ ಅಂಬ್ರೋಸ್ ಡಿ’ಸೋಜಾ, ಪ್ರಿನ್ಸಿಪಾಲ್ ಗೀತಾಶ್ರೀ ಕೆ.ಎಸ್., ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ಮಹಮ್ಮದ್ ಅನ್ಸಾರ್, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಶರತ್ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಹರಿಪ್ರಕಾಶ್ ಬೈಲಾಡಿ ಸ್ವಾಗತಿಸಿದರು. ಉಪನ್ಯಾಸಕ ಬಾಲಕೃಷ್ಣ ನಾಯಕ್ ವಂದಿಸಿದರು. ಶಿಕ್ಷಕಿಯರಾದ ಇಂದಿರಾ ಭಂಡಾರಿ ಮತ್ತು ಜ್ಯೋತಿರಾಣಿ ಕಾರ್‍ಯಕ್ರಮ ನಿರೂಪಿಸಿದರು. ಉಪನ್ಯಾಸಕ ಗೋಪಾಲಕೃಷ್ಣ, ಅಧ್ಯಾಪಿಕೆಯರಾದ ರವಿಕಲಾ ಟಿ, ಸಜಿಲಾ, ಸುನೀತಾ, ನಿರ್ಮಲಾ, ಬಾಲಕೃಷ್ಣ ನಾಯಕ್, ಸೀತಾ, ಚಂದ್ರಾವತಿ, ರವಿಕಲಾ ಬಿ.ಎಸ್., ವಿದ್ಯಾರಾಣಿ, ವಿದ್ಯಾರ್ಥಿಗಳಾದ ಹರ್ಷ, ರೋಯಲ್ ಡಿ’ಸೋಜಾ ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ಪ್ರದರ್ಶನಗೊಂಡಿತು.
