Wednesday, October 18, 2023

ಸಿದ್ಧಕಟ್ಟೆ ಸ.ಪ್ರೌ.ಶಾಲೆ ಗಣಿತ ದಿನಾಚರಣೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಸಂಘದ ವತಿಯಿಂದ ರಾಷ್ಟ್ರೀಯ ಗಣಿತ ದಿನಾಚರಣೆ ಡಿ. 22ರಂದು ಆಚರಿಸಲಾಯಿತು.
ಕಾಲೇಜು ಉಪಪ್ರಾಂಶುಪಾಲ ರಮಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗಣಿತಜ್ಞರು ನೀಡಿದ ಕೊಡುಗೆಯ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಮಾದರಿ ತಯಾರಿ ಸ್ಪರ್ಧೆ ಹಾಗೂ ಭಾರತೀಯ ಗಣಿತಜ್ಞರ ಪರಿಚಯದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಗಣಿತ ಸಂಘದ ಉಪಾಧ್ಯಕ್ಷೆ ಧನುಶ್ರೀ ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಣತಿ ಸ್ವಾಗತಿಸಿದರು. ಪ್ರಾಪ್ತಿ ವಂದಿಸಿದರು. ಅನುಷ್ ಕಾರ್ಯಕ್ರಮ ನಿರೂಪಿಸಿದರು.

More articles

Latest article