ಬಂಟ್ವಾಳ : ಬಂಟ್ವಾಳ ತಾಲೂಕಿನ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಇವರಿಗೆ ಮಾಧ್ಯಮ ಮತ್ತು ಸಮಾಜ ಸೇವೆಗಾಗಿ ಮುಂಬೈ ಗಾಣಿಗ ಯಾನೆ ಸಾಫಲ್ಯ ಸೇವಾ ಸಂಘದ ವತಿಯಿಂದ ಕುರ್ಲಾ ಬಂಟರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ’ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ, ಮಾಜಿ ಅಧ್ಯಕ್ಷ ಎಂ.ಜಿ.ಕರ್ಕೇರ, ವಿವಿಧ ಜಾತಿ ಸಂಘಟನೆ ಅಧ್ಯಕ್ಷರಾದ ಪದ್ಮನಾಭ ಪಯ್ಯಡೆ, ಚಂದ್ರಶೇಖರ ಪೂಜಾರಿ, ಕಡಂದಲೆ ಸುರೇಶ ಭಂಡಾರಿ, ಧರ್ಮಪಾಲ ದೇವಾಡಿಗ, ನಡಿಗುತ್ತು ನಿತ್ಯಾನಂದ ಹೆಗ್ಡೆ, ದೇವದಾಸ ಪಿ.ಕುಲಾಲ್, ಜಿತೇಂದ್ರ ಗೌಡ, ಕುತ್ಪಾಡಿ ರಾಮಚಂದ್ರ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
