ಬಂಟ್ವಾಳ: ಸಜೀಪ ನಡು ವಿನಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೋಲೀಸರು
ಬಂಧಿಸಿ ದ್ದಾರೆ.‌ಸಜೀಪ ನಡು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ರಫೀಕ್ ,ಸಜಿಪ ನಡು ,ಇದಿನಬ್ಬ
ಎಂಬವರ ಮಗ ಅಶ್ರಪ್ ಬಂಧಿತ ಆರೋಪಿಗಳು.ಸಜಿಪ‌‌ ನಡು ಬೀಟ್ ಸಿಬ್ಬಂದಿಯವರಾದ ಹೆಚ್.ಸಿ. ಜನಾರ್ದನ ರವರು ಸಜಿಪ ನಡುವಿನ ಹೊಳೆಬದಿಯಲ್ಲಿ ಹಸುವನ್ನು ಕಡಿದು ಮಾಂಸ ಮಾಡುತ್ತಿದ್ದಾರೆ ಎಂದು ನೀಡಿದ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಮತ್ತು ಸಿಬ್ಬಂದಿಯವರು ದಾಳಿಮಾಡಿದಾಗ ಮನೆಯ ಹಿತ್ತಲಲ್ಲಿ ಒಂದು ಹಸುವನ್ನು ಕಡಿದು ಮಾಂಸ ಮಾಡುತ್ತಿದರು.

ಅಲ್ಲದೆ ಸ್ಥಳದಲ್ಲಿ ಮಾಂಸ ಮಾಡಿದ್ದ ಸುಮಾರು 100 ಕೆ.ಜಿ ಮಾಂಸ ,4 ಹೆಣ್ಣು ಹಸುಕರು ಗಳನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ .ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲಿಸ್ ಠಾಣೆ ಅ.ಕ್ರ 152/18 ಕಲಂ 4,5,7,9 prevention of cow slaughter and cattle preservation act . ಕಲಂ 11 cruelty against animal act. ರಂತೆ ಪ್ರಕರಣ ದಾಖಲಾಗಿರುತ್ತದೆ.ಎಸ್.ಪಿ.ರವಿಕಾಂತೆ ಗೌಡ
ಹೇಚ್ಚುವರಿ ಪೊಲೀಸ್ ಅಧೀಕ್ಷರ
ಸಜಿತ್ ,ರವರ ನಿರ್ದೇಶನದಲ್ಲಿ, ಬಂಟ್ವಾಳ ಎ.ಎಸ್.ಪಿ. ಸೊನವಾಣೆ ASP ಬಂಟ್ವಾಳ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ವ್ರತ್ತ ನಿರೀಕ್ಷಕ ನಾಗರಾಜ್ , ಗ್ರಾಮಾಂತರ ಎಸ್.ಐ. ಪ್ರಸನ್ನ ಸಿಬ್ಬಂದಿ ಯವರಾದ ಜನಾರ್ದನ, ಸುರೇಶ್, ಸುಭಾಷ್ ಶೆಣೈ, ಪುನಿತ್,ಮೊಹನ,ನಾಗನಾಥ,ಮನೋಜ,ಭಾಸ್ಕರ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here