ಬಂಟ್ವಾಳ: ವಿವಾದಿತ ಪರಂಗಿಪೇಟೆ ಮೀನಿನ ಮಾರ್ಕೆಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ರೈಲ್ವೆ ಇಲಾಖೆಯ ವರ ಜಮೀನು ಅತಿಕ್ರಮಿಸಿ ಪರಂಗಿಪೇಟೆ ಪ್ರದೇಶದ ದಲ್ಲಿ ಮೀನಿನ ಮಾರ್ಕೆಟ್, ತರಕಾರಿ, ಹಣ್ಣು ಹಂಪಲು ಅಂಗಡಿ ಗಳನ್ನು ಮಾಡಿದ್ದಾರೆ ಎಂಬುದು ರೈಲ್ವೆ ಇಲಾಖೆಯ ವರ ಆರೋಪವಾಗಿದ್ಧು , ಅಕ್ರಮ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ರೈಲ್ವೆ ಇಲಾಖೆ ಯವರ ಒತ್ತಾಯವಾಗಿತ್ತು.
ಈ ಬಗ್ಗೆ 2016 ರಲ್ಲಿ ಅಂಗಡಿಗಳ ಮಾಲಕರಿಗೆ ನೋಟೀಸ್ ಜಾರಿ ಮಾಡಿದ್ದರು. ಅ ನಂತರ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿರುವ ಇಲಾಖೆ ಕಳೆದ ವಾರ ಅಂತಿಮ ನೋಟೀಸ್ ಜಾರಿ ರೈಲ್ವೆ ಇಲಾಖೆ ಯ ಪೋಲೀಸ್ ಸಹಿತ ಡ್ರೋನ್ ಕ್ಯಾಮರಾ ಅಳವಡಿಸಿ ತೆರವು ಕಾರ್ಯಚರಣೆಗೆ ಮುಂದಾಗಿತ್ತು. ಆದರೆ ಸ್ಥಳೀಯ ಹಾಗೂ ಅಂಗಡಿ ಮಾಲೀಕರ ವಿರೋಧ ದ ಹಿನ್ನೆಲೆಯಲ್ಲಿ ಮಾತುಕತೆಯನ್ನು ನಡೆಸಿದ ಇಲಾಖೆ ಜ.15 ರವರೆಗೆ ಕಾಲಾವಕಾಶ ನೀಡಿತ್ತು.‌ಅದರೊಳಗೆ ಅಂಗಡಿಗಳನ್ನು ತೆರವುಗೊಳಿಸಲು ನೋಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೀನು ಮಾರ್ಕೆಟ್ ಹಾಗೂ ಇತರ ಅಂಗಡಿ ಮಾಲಕರಿಗೆ ಅಲ್ಲೇ ಸಮೀಪದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸ್ಥಳ ಗುರುತಿಸಿ ಬಳಿಕ ಗ್ರಾಮ ಪಂಚಾಯತ್ ಇವರಿಗೆ ಬದಲಿ ವ್ಯವಸ್ಥೆ ಶೀಘ್ರವಾಗಿ ಕಲ್ಪಿಸಿಕೊಡಲು ಸೂಚಿಸಿ ದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅದ್ಯಕ್ಷ ರಮ್ಲಾನ್ ಪುದು, ಪ್ರಮುಖರಾದ ಫಾರೂಕ್ ಪರಂಗಿಪೇಟೆ,ಹಾಶೀರ್ ಪೇರಿಮಾರ್, ಬಂಟ್ವಾಳ ಸಿ.ಐ. ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಮತ್ತಿತರ ರು ಉಪಸ್ಥಿತರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here