ವಿಟ್ಲ: ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಮಂಗಳವಾರ ಪೆರುವಾಯಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ದೇವಾಲಯದವರೆಗೆ ನಡೆಯಿತು.
ಬೆಳಗ್ಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರದಿಂದ ಹೊರಟ ಭಜನಾ ಸಂಕೀರ್ತನೆಯನ್ನು ರಾಮಕೃಷ್ಣ ಕಾಟುಕುಕ್ಕೆ ಉದ್ಘಾಟಿಸಿದರು. ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಗೆ ಗಣುಮೂಲೆ ಕೆ. ಜಿ. ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ವೈದಿಕರ ಸಹಿತ ತಂತ್ರಿಗಳ ಆಗಮನವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಕಲಾತ್ತಿಮಾರು ವೆಂಕಪ್ಪ ಮಾರ್ಲ ಮತ್ತು ಸಚಿನ್ ಅಡ್ವಾಯಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಡಿವಾಯಿ ನಾರಾಯಣ ರೈ, ಕಾರ್ಯಾಧ್ಯಕ್ಷ ಎಂ.ಚಂದ್ರಹಾಸ ಕಾವ ಗುರುಪುರ, ಗೌರವ ಸಲಹೆಗಾರ ಗೋಪಿನಾಥ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಕಲಾತ್ತಿಮಾರು, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಕಲಾತ್ತಿಮಾರು, ಕೋಶಾಧಿಕಾರಿ ಮನೋಹರ ಶೆಟ್ಟಿ ಪೇರಡ್ಕ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ, ಸದಾಶಿವ ಅಳಿಕೆ, ಹೊರೆಕಾಣಿಕೆ ಸಮಿತಿಯ ಪುರುಷೋತ್ತಮ ಶೆಟ್ಟಿ ಕೆಳಗಿನಮನೆ, ಮಧುಸೂದನ ಶೆಟ್ಟಿ ಕಡೆಂನಿಲ ಮತ್ತು ಇತರ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


