Thursday, October 26, 2023

ಡಿ.26ರಂದು ಶಂಭುಗ ಶ್ರೀ ಗುಡ್ಡೆಚಾಮುಂಡಿ ದೈವಸ್ಥಾನದ ಕಾಲಾವಧಿ ನೇಮ

Must read

ಬಂಟ್ವಾಳ:  ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ-ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀ ಪಂಜುರ್ಲಿ,  ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಯು ಡಿ.26ರಂದು ಬುಧವಾರ ನಡೆಯಲಿದೆ. ಆ ಪ್ರಯುಕ್ತ ಡಿ.19ರಂದು ಬೆಳಿಗ್ಗೆ 11 ಗಂಟೆಗೆ ಗಣಹೋಮ ಮತ್ತು ಗೊನೆ ಕಡಿಯಲಾಗುವುದು.
ಡಿ.26ರಂದು ಬೆಳಿಗ್ಗೆ 10ಗಂಟೆಗೆ ಮಾಣಿಗುತ್ತುವಿನಿಂದ ಶ್ರೀ ದೈವದ ಭಂಡಾರ ಹೊರಟು 11ಕ್ಕೆ ಶಂಭುಗ ಸ್ಥಾನಕ್ಕೆ ಆಗಮನ.  ಮಧ್ಯಾಹ್ನ 12.30ಕ್ಕೆ ಪ್ರತಿಷ್ಠಾ ದಿನಾಚರಣೆಯ ಪ್ರಯುಕ್ತ ತಂಬಿಲ ಸೇವೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪನೆ ಸಂಜೆ 6 ಗಂಟೆಗೆ ಅರಸು ಶ್ರೀ ಗುಡ್ಡೆಚಾಮುಂಡಿ ದೈವದ ನೇಮ,ರಾತ್ರಿ 10 ಗಂಟೆಗೆ ಪ್ರಧಾನಿ ಶ್ರೀ ಪಂಜುರ್ಲಿ ದೈವದ ನೇಮ, 11ಕ್ಕೆ ಬಂಟೆದಿ ಶ್ರೀ ಮಲೆಕೊರತಿ ದೈವದ ನೇಮ,ರಾತ್ರಿ 12 ಗಂಟೆಗೆ ಭಂಡಾರ ಇಳಿಕೆ ಮಾಡಲಾಗುತ್ತದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

More articles

Latest article