Sunday, October 22, 2023

*ಪುಟ್ಟ ಮರೆತ ಹಾಡು*

Must read

ಆಡ ಹೋದ ಮಗನು

ಬಂದು ತೊಡೆಯನೇರಿದ

ಹಾಡನೊಂದು ಹಾಡು

ಎಂದು ಒಡನೆ ಕೇಳಿದ

  ಹಾಡದಿರುವ ಎದೆಗೆ

ಒರಗಿ ಬಿಡದೆ ಬೇಡಿದ

ಹಾಡದಿರೆ ‘ಬಿಡೆನು ನಾನು’

ಎಂದು ಕಾಡಿದ

  ಮಾಡಲೇನು ನಾನು

ಈಗ ಹಾಡನೆಲ್ಲಿ

ಹುಡುಕಿ ತರಲಿ?

ಕಾಡುತಿರುವ ಮಗನ

ಹಟ ಕದಾವ ದಾರಿ ತೋರಲಿ?

  ಹಕ್ಕಿಯೊಂದು ಹಾರಿ ಬಂತು

ಗಕ್ಕನೆಂದು ಗಿಡದಿ ಕುಳಿತು

ಉಕ್ಕುವೆದೆಯಲುಲಿದು ಮಣಿದು

ಹಾಡತೊಡಗಿತು

  ತಟ್ಟನೆದ್ದ ನನ್ನ ಪುಟ್ಟ

ತೊಡೆಯನಿಳಿದು ಓಡಿಬಿಟ್ಟ

ಹಕ್ಕಿಯೊಡನೆ ತಾನು ಸೇರಿ

ನನ್ನ ಹಾಡು ಮರೆತುಬಿಟ್ಟ  

#ನೀ.ಶ್ರೀಶೈಲ  ಹುಲ್ಲೂರುಮಂದಹಾಸ  ಬಸವೇಶ್ವರ ವೃತ್ತಜಮಖಂಡಿ – 587301

More articles

Latest article