ಕೇಳದು ಮನುಜಗೆ ಭೂಮಿಯ ಕೂಗು
ಬಾಳಲು ಬೇಕೇ ಇಳೆಗೆ ಶರಣಾಗು…
ಉಸಿರಾಡಲು ಬೆಳೆಸೋ ಗಿಡಮರ ಬಳ್ಳಿ
ಕಡಿದು ಬದುಕಿಗೆ ಇಡುತಲಿರುವೆ ನೀನೇ ಕೊಳ್ಳಿ…

ಮಾನವನಾಸೆಗೆ ಕೇಳಿಸದು ತಿರೆಯಳಲು
ಕಾಮದ ತೃಷೆಗೆ ಸತ್ತು ಹೋಗಿದೆ ಕಂದಮ್ಮನಳು..
ಮನದಾಳದ ಬೇರು ಇಳಿದಿದೆ ಹಣದೊಳು
ನೂಲಲು ಮಾನವ ಹುಡುಕುವ ಧನ ಬಲು..

ಭುವಿಯ ಚೀತ್ಕಾರಕೆ ಬಾನಿನ ಸುರಿಮಳೆ
ಒಂಟಿ ಹೆಣ್ಣಿಗೆ ಮಳೆಹನಿಗಳ ಮಣಿಗಳೆ
ಸೂರ್ಯನ ಶಾಖದ ಕಿರಣದ ಅಪ್ಪುಗೆಯಲಿ
ಚಂದ್ರನ ಬೆಳದಿಂಗಳ ಚುಂಬನದುದಕದಲಿ…

ರವಿಚಂದಿರರ ರಕ್ಷೆಯಲಿ ಸೊಂಪಾಗಿ ಬೆಳೆದ
ಹಸಿರ ಸುಂದರಿಗಿದೋ ವಾತಾವರಣ ಭಯದ..
ಹಸಿರ, ಹೂ ರಾಶಿಗಳ ಕತ್ತರಿಸಿ ಬಿಸುಟ
ಮನುಜನ ಮೇಲೆ ಹಲ್ಲು ಕಡಿಯುತಿಹಳು ಕಟಕಟ..

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here