Wednesday, October 18, 2023

ಗಜಲ್ 58

Must read

ಪ್ರತಿ ವಿಷಯಗಳಿಗೆ ಒಂದಿದೆ ವಿರುದ್ಧ ವಿಷಯ ವಾದ ವಿವಾದ ತಂತ್ರ ಲೀಲೆ/
ಒಳಗೊಂದು ಹೊರಗೊಂದು ಆಗದು ಎಂದೂ ಒಂದಕ್ಕೊಂದು ಮಂತ್ರ ಮಾಲೆ//

ಹಗ್ಗಜಗ್ಗಾಟ ಸ್ವಾರ್ಥದ ತಿರುಳು ಬೇಕಾದ್ದದೆ ಬೇಯಿಸಿಕೊಳ್ಳಲು ಅವರವರ ಬೇಳೆ/
ಅಡ್ಡ ಮಾರ್ಗಕ್ಕೆ ಶತಸಿದ್ದ ಸುಲಭ ಯಶಸ್ಸು ತಂಟೆ ತಕರಾರುಗಳ ಕಾರ್ಯತಂತ್ರ ಕಲೆ//

ಬೇಕಾಬಿಟ್ಟಿ ಹಚ್ಚುವ ಕಿಡಿ ಹೊತ್ತಿ ಉರಿದು ತಿರುಗಿ ಬೀಳುವ ಜಟಿಲ ವಿವಾದಗಳಿಗೆ/
ಮರೆತು ಮನುಷತ್ವ ಹಿಡಿದ ಸುರಕ್ಷಿತ ದಾರಿ ನೋಡಿ ಪಡುವ ಮಜಾ ಕುತಂತ್ರ ಒಲೆ//

ಎಡಪಂಥ ಬಲಪಂಥ ಹಿಂದೂ ಮುಸ್ಲಿಂ ದೆವ್ವ ದೇವರು ನದಿ ಭಾಷೆ ಊರು ವಾವ್/
ತಂದಿಡಬೇಕು ಎರಡರ ನಡುವೆ ತಂದಷ್ಟೆ ಬೇಡಿಕೆಯ ಬೆಲೆ ಅತಂತ್ರ ಕರೆಯೋಲೆ//

ಗುರುತಿಸಿಕೊಳ್ಳಲು ಕಠೋರ ಪ್ರತಿಪಾದನೆ ಒಮ್ಮೆ ಗುರುತಾಗಲು ಆ ಕಡೆ ಈ ಕಡೆ/
ಎಳೆದೆಳೆದು ಬಿಡಬೇಕು ತುಂಬಿ ಮೇಲೆ ಬರಲು ಹೆಸರು ಯಂತ್ರ ಸವಿಯೋಲೆ//

ದೊರೆತ ಬೆಂಬಲಿಗರು ಎದುರಾಳಿಗಳಿಂದ ಸಿಕ್ಕಷ್ಟು ಲಾಭ ಬಿಟ್ಟಿ ಪ್ರಚಾರ ಖಂಡಿತ/
ಎಲ್ಲಿಯೂ ಇರಬಾರದು ಇರುತ್ತಿರಬೇಕು ಎಲ್ಲೆಲ್ಲೂ ಚಾಣಾಕ್ಷ ಗಣತಂತ್ರ ಬಾಲೆ//

ಖ್ಯಾತ ಸಾಹಿತಿಯ ಕಾಲೆಳೆವ ಯೋಚನೆ ಇನ್ನೊಬ್ಬ ದೊಡ್ಡ ಕವಿಯ ಶಿಷ್ಯ ನಾನೆಂದು/
ಒಪ್ಪದ ಮನ ಜಾಸ್ತಿ ಒಳ್ಳೆಯವನಾದನಾ ಬೇಸರ ಆಗಾಗ ಸರ್ವತಂತ್ರ ಕಿವಿಯೋಲೆ//

ಬಸವರಾಜ ಕಾಸೆ

More articles

Latest article