


ಧೈರ್ಯದ ಕತೆ ಹೇಳಿವೆ ಜೊತೆಯಲ್ಲಿ ಇಟ್ಟ ಜೋಡಿ ಹೆಜ್ಜೆಗಳು ಕುರುಹಾಗಿ/
ತಂಗಾಳಿ ತಾಗಿ ತಣ್ಣಗೆ ನೆರೆದಿದೆ ಬೆಸೆದ ಬೆರಳುಗಳ ಬೆಚ್ಚನೆ ಬೆಸುಗೆಯಾಗಿ//
ನಿನ್ನ ನಾಮ ಧ್ಯಾನ ಮರೆತೊಡೆ ಚುಚ್ಚಿತ್ತು ಸ್ಪರ್ಶಿಸಲು ಕೋಮಲ ಹೂ/
ನವ್ಯ ಕಾವ್ಯವಾಗಿದೆ ನಿನಗಾಗಿ ಕಾಯುವ ಪರಿ ಜನಿಸಿದ ಭಾವ ಝರಿಯಾಗಿ//
ಸಿಗುವ ಪ್ರತಿ ಸಂಜೆ ಪಿಸುಗುಡುವೆ ಗರಿ ಬಿಚ್ಚಿ ಹಕ್ಕಿ ಹಾಡುವುದು ಆಗಲೇ/
ನನ್ನೆ ನಾ ಮರೆತು ಬಿಡುವೆ ನೋಡುತ್ತಾ ನಿನ್ನೆ ಸುಖವೆನಿಸಿ ಹಾಯಾಗಿ//
ಹುಚ್ಚೆದ್ದು ಕುಣಿವ ಕನಸುಗಳ ತರಂಗ ಸವಿ ಒಡನಾಟ ಬಾಳ ಅವಲೋಕನ/
ನಡೆದಿದೆ ಭವಿಷ್ಯ ವಿಮರ್ಶೆ ಮೂಡಿದ ಉಪಾಯ ಯೋಜನೆಗಳ ಜಾರಿಗಾಗಿ//
ಇದ್ದರೆ ಇರಬೇಕು ಹೀಗೆ ಎನ್ನುವ ಹಾಗೆ ಒಂದಾಗಿ ಬೆರೆತಿದೆ ಆತ್ಮೀಯತೆ/
ರೆಪ್ಪೆ ಮಿಟುಕುವ ಕಂಗಳ ಮಿಡಿತ ಈ ಹೃದಯ ಬಡಿತ ಹುರುಪೆಂದು ನೀನಾಗಿ//

ಬಸವರಾಜ ಕಾಸೆ


