ಬಂಟ್ವಾಳ :ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಕುಟ್ಟಿಕಳ ಶ್ರೀ ಭದ್ರಕಾಳಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಗುರುವಾರ ರಾತ್ರಿ ಕಾರಣಿಕ ಪ್ರಸಿದ್ಧ ಕಲ್ಲುರ್ಟಿ ದೈವದ ವಾರ್ಷಿಕ ನೇಮೋತ್ಸವ ನಡೆಯಿತು. ಧರ್ಮದರ್ಶಿ ಜನಾರ್ದನ ಶಾಂತಿ, ಸಮಿತಿ ಅಧ್ಯಕ್ಷ ಬಿ.ಮಹಾಬಲ ಸಪಲ್ಯ, ರತ್ನಾಕರ ಪೂಜಾರಿ, ಸಂತೋಷ್ ಅಂಚನ್, ಗಣೇಶ ಪೂಜಾರಿ ಮತ್ತಿತರರು ಇದ್ದರು.


