Thursday, September 28, 2023

ಸಂತ ಅಂತೋನಿಯ ಚರ್ಚ್‌ನಲ್ಲಿ ಸಂಭ್ರಮದ ಕ್ರಿಸ್ಮಸ್

Must read

ಸಂತ ಅಂತೋನಿಯ ಚರ್ಚ್ ಅಲ್ಲಿಪಾದೆ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಫೆಡ್ರಿಕ್ ಮೊ೦ತೆರೊ, ವಂದನೀಯ ಸ್ಟ್ಯಾನಿ ಫೆರ್ನಾಂಡಿಸ್ ಫಾದರ್, ವಂದನೀಯ ನವೀನ್ ದಿವ್ಯ ಬಲಿಪೂಜೆಯೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕ್ರಿಸ್ಮಸ್ ಗೋಧಳಿ ಸ್ಪರ್ಧೆಯಂತಹ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಹಾಗೂ ಚರ್ಚ್‌ನಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಇಡೀ ಚರ್ಚ್ ಗೂಡುದೀಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು. ಅಪಾರ ಸಂಖ್ಯೆಯಲ್ಲಿ ನೆರೆದ ಭಕ್ತರು ಈ ಸಡಗರಕ್ಕೆ ಸಾಕ್ಷಿಯಾದರು.

More articles

Latest article