ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಆರ್ಯಭಟ ಸಂಸ್ಥೆ ಬೆಂಗಳೂರು ಇವರ ಸಹಯೋಗದಿಂದ ಕಾರ್ಮೆಲ್ ಪ್ರೌಢಶಾಲೆ ಮೊಡಂಕಾಪು ಇಲ್ಲಿ ’ಸೈನ್ಸ್ ಆನ್ ವೀಲ್’ ಕಾರ್ಯಕ್ರಮವನ್ನು ನವೆಂಬರ್ 5 ರಂದು ಆಯೋಜಿಸಲಾಯಿತು.



ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷರಾದ ಮಂಜುನಾಥ್ ಆಚಾರ್‍ಯ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು, ಪಾಠಗಳಲ್ಲಿ ಪ್ರಯೋಗಗಳನ್ನು ಸ್ವತಃ ವಿದ್ಯಾರ್ಥಿಗಳು ಮಾಡಿ ತಿಳಿದಾಗ ವಿಜ್ಞಾನ ಪರಿಕಲ್ಪನೆ ಅರ್ಥೈಸಿಕೊಳ್ಳಲು ಇಂತಹ ಪ್ರಯೋಗಗಳು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಆರ್ಯಭಟ ಸಂಸ್ಥೆಯ ಸತೀಶ್ ಹಾಗೂ ಲಕ್ಷ್ಮೀಪತಿಯವರು ವಿದ್ಯಾರ್ಥಿಗಳಿಗೆ ಶಬ್ದ, ಬೆಳಕು, ಇಲೆಕ್ಟ್ರಾನಿಕ್, ರೋಬೋಟಿಕ್ಸ್ ಬಗ್ಗೆ ಸವಿವರವಾಗಿ ಪ್ರಯೋಗಗಳನ್ನು ಮಾಡಿ ತೋರಿಸಿದರು. ಹಾಗೂ ಡ್ರೋನ್ ಹಾರಾಟದ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಕಾರ್ಯಕ್ರಮದಲ್ಲಿ ವಂ.ಸ್ವಾಮಿ ಅಶ್ವಿನ್ ಕ್ರಾಸ್ತ , ರೋ| ಸಂದೀಪ್ ಮಿನೇಜಸ್ ರೋ| ಪ್ರಭಾಕರ್ ಪ್ರಭು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕರಾದ ರೋಶನ್ ಪಿಂಟೊ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಭ.ನವೀನ ಎ.ಸಿ ವಂದಿಸಿದರು.