ನಡೆಯಲಿ ನಡೆ ಗಿಡ ನೆಡುವ ಕಡೆ
ಹಸಿರು ನಮ್ಮ ಜೀವ ಜಗದ ಹೆಸರು
ನಿಸರ್ಗ ಮೇಲಿನ ಸತತ ದಾಳಿಯ ತಡೆ
ಸುತ್ತಮುತ್ತ ಹೆಚ್ಚುವ ಪರಿಸರ ಉಸಿರು

ಮೀಸಲು ಅರಣ್ಯ ಸಹ ಮಾಯಾವಾಗಿ
ಇದ್ದ ಬಂದ ಬಿದ್ದ ಮಳೆ ಕಡಿಮೆಯಾಗಿ
ಬತ್ತಿ ನದಿ ಕೆರೆ ಜಲಾಶಯ ಹೂಳು ತುಂಬಿ
ಹೊಸ ರೋಗಗಳು ಹರಡಿವೆ ಜನರಲ್ಲಿ

ಹೆಚ್ಚು ಹೆಚ್ಚು ವಾಹನಗಳ ಬಳಕೆ
ವಿದ್ಯುತ್ ಸ್ಥಾವರ ಕಲ್ಲಿದ್ದಲು ಸುಟ್ಟ ಧೂಳು
ಮಿತಿ ಮೀರಿದ ಇಂಧನಗಳ ಅವಲಂಬನೆ
ವೇಗವಾಗಿ ಮಾಲಿನ್ಯ ಜೀವವೆ ಇಲ್ಲಿ ಹಾಳು

ಬೆಳೆಗಳಿಗೆ ಕೀಟ ಶಿಲೀಂಧ್ರ ಕಳೆನಾಶಕ
ಇಲಿ ಹುಳ ಜಿರಳೆಗಳ ಸಿಂಪಡಣೆ ಪಾಷಾಣ
ಅತಿ ರಸಗೊಬ್ಬರ ಸುರಿದ ಪರಿಣಾಮ
ಹೊಕ್ಕು ದೇಹ ಕಮ್ಮಿ ಆರೋಗ್ಯ ಪ್ರಮಾಣ

ದೈನಂದಿನ ಆದ್ಯತೆ ಅನಿವಾರ್ಯ ನಡುವೆ
ಮೂಡಬೇಕು ಪರಿಸರ ಸಾಮಾನ್ಯ ಜ್ಞಾನ
ಉದಾಸೀನತೆ ತಿಳಿಗೇಡಿತನ ಸ್ವಾರ್ಥ ಲಾಭ
ಬಿಟ್ಟು ಎಚ್ಚರವಾಗದಿರೆ ಭವಿಷ್ಯ ಅವಶೇಷ

ಬಸವರಾಜ ಕಾಸೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here