Sunday, October 22, 2023

ಕೆಟ್ಟು ಹೋದ ಲಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ

Must read

ಬಂಟ್ವಾಳ: ರಸ್ತೆ ಮಧ್ಯೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಮಾಣಿ ಸಮೀಪದ ಹಳಿರ ಎಂಬಲ್ಲಿ ನಡೆದಿದೆ.
ಮುಂಜಾನೆ ಸುಮಾರು ನಾಲ್ಕು ಗಂಟೆಯ ವೇಳೆ ಲಾರಿಯು ಎಕ್ಸೀಲ್ ತುಂಡಾಗಿ ಲಾರಿ ಕೆಟ್ಟುಹೋದ ಪರಿಣಾಮ ಬೆಳಿಗ್ಗೆಯಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ರೀತಿಯಲ್ಲಿ ಸಂಚಾರ ಅಡಚಣೆಯಾದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಸ್ಥಳೀಯರು ವಿಟ್ಲ ಠಾಣೆಗೆ ತಿಳಿಸಿದರೂ ಕೂಡ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದರು. ಸಾರ್ವಜನಿಕರೇ ಟ್ರಾಫಿಕ್ ಕ್ಲೀಯರ್ ಮಾಡುವ ದೃಶ್ಯ ಕಂಡು ಬಂತು.

More articles

Latest article