Sunday, October 22, 2023

ಸಾಲ ಬಾಧೆಯಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ

Must read

ಬಂಟ್ವಾಳ: ಸಾಲದ ಬಾಧೆಯಿಂದ ಮನನೊಂದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮೊಗರ್ನಾಡು ನಿವಾಸಿ ಅಶೋಕ್ (42) ಅವರು ಆತ್ಮಹತ್ಯೆ ಮಾಡಿಕೊಂಡವರು.
ಆಶೋಕ್ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದರು, ಪಾಣೆಮಂಗಳೂರು ಪಾರ್ಕ್ ನಲ್ಲಿ ರಿಕ್ಷಾ ಒಡಿಸುತ್ತಿದ್ದ ಇವರು ಇತ್ತೀಚೆಗೆ ಹೊಸ ಮನೆ ಕಟ್ಟಿದ್ದರು.
ಅವರು ಈ ಮನೆ ಮಾಡುವ ಸಂದರ್ಭದಲ್ಲಿ ಬ್ಯಾಂಕ್ ಸಾಲ ಮಾಡಿದ್ದಾರೆ. ಈ ಸಾಲವನ್ನು ತೀರಿಸಲು ಸಾಧ್ಯವಿಲ್ಲ ದೆ ಕೊನೆಗೆ ಮನೆಯನ್ನು ಮಾರಿ ಅದೇ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.‌ ಆದರೆ ಇತ್ತೀಚೆಗೆ ಸಾಲದಿಂದ ಮನೆಯನ್ನು ಮಾರಾಟ ಮಾಡಿದ ಮೇಲೆ ಮನನೊಂದಿದ್ದರು ಎಂದು ಮನೆಯವರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

More articles

Latest article