ಬಂಟ್ವಾಳ: ಪುಡ್ ಪಾಯಿಸನ್ ಗೊಳಗಾಗಿ ಅನಾರೋಗ್ಯ ಪೀಡಿತ ಳಾದ ವಿದ್ಯಾರ್ಥಿ ನಿಯೋರ್ವಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಗಿರಿಯಪ್ಪ ಅವರ ಪುತ್ರಿ ಕೀರ್ತಿ ( 19) ಮ್ರತಪಟ್ಟ ವಿದ್ಯಾರ್ಥಿ ನಿ.
ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಯಾಗಿದ್ದು , ಈಕೆಗೆ ವಾಂತಿಯಾಗುತ್ತಿದೆ ಎಂಬ ಕಾರಣಕ್ಕೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕವೂ ಗುಣಮುಖರಾಗದ ಹಿನ್ನೆಲೆಯಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಡಾಕ್ಟರ್ ಸಲಹೆಯಂತೆ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ವಾಂತಿಗೆ ಸರಿಯಾದ ಕಾರಣ ಗೊತ್ತಾಗದ ಹಿನ್ನೆಲೆಯಲ್ಲಿ ಒವರ್ ಡೋಸ್ ಔಷಧಿ ಯಿಂದಾಗಿ ಕೀರ್ತಿ ಸಾವಿಗೆ ಕಾರಣವಾಗಿದೆ ಎಂದು ಮನೆಯವರು ಆರೋಪ ವ್ಯಕ್ತಪಡಿಸಿದ್ದಾರೆ.
ಕೀರ್ತಿ ಅವಳ ತಂದೆ ವಿಕಲಾಂಗ ಮತ್ತು ತಾಯಿಯವರಿಗೆ ಒಂದು ಕಣ್ಷು ಇಲ್ಲದೆ ದುಡಿದು ತಿನ್ನಲು ಶಕ್ತವಾಗದ ಬಡ ಕುಟುಂಬ.
