ಯಾರು ಸಾಟಿಯಿಲ್ಲದ ತಾಯಿ ಪ್ರೀತಿ
ಅವಳ ಬಿಟ್ಟರೆ ಯಾರು ತುಂಬಬಲ್ಲರು
ಮುಗ್ಧ ಮಗು ಮನಸಿನ ಪುಟ್ಟಿ
ನಗುತ್ತಾ ನಿಂತಳು ಕಣ್ಣೆದುರು

ಆದಳು ಅಕ್ಕರೆಯ ಮುದ್ದು ತಂಗಿ
ಅಕ್ಕ ಆಗಬೇಕಿತ್ತು ಏನೋ ಪುಟ್ಟಿ
ಹುಟ್ಟಿದಳು ಬೆನ್ನಾ ಹಿಂದೆ ತುಸು ತಡವಾಗಿ
ಕೊಟ್ಟಾಳು ಪ್ರೀತಿಯಲ್ಲಿ ಅವ್ವಗೆ ಪೈಪೋಟಿ
ಅಷ್ಟಿಷ್ಟಲ್ಲ ಹಗಲಿರುಳು ಅವಳ ಪಾಡು
ದೂರದ ಊರಲ್ಲಿ ಇದ್ದು ನನ್ನ ಓದು
ನಾ ಬಾಚಿ ತಬ್ಬಿ ಎತ್ತಿ ಆಡಿಸಿದ ಕೂಸು
ಬಿಟ್ಟು ಕೊಡಲಿಲ್ಲ ಯಾರೆದುರು ಎಂದು
ನಾ ಮಾಡಬೇಕಿದ್ದ ಎಲ್ಲಾ ಕೆಲಸ
ಮಾಡಿದ ಆ ಗುಣ ಮುಗಿಲಿನ ಮಿಗಿಲು
ಇನ್ನೊಬ್ಬ ಮಗ ಇಲ್ಲವೆಂಬ ಕೊರಗು
ನೀಗಿಸಿ ನಿಂತಳು ಅಪ್ಪನಿಗೂ ನೆರಳು
ಅಕ್ಕಪಕ್ಕ ತಾಯಿ ತಂಗಿ ಅಪ್ಪ ಬೆಳ್ಳಿ ಚುಕ್ಕಿ
ನೋವು ಕಣ್ಣೊರೆಸುವ ಧೈರ್ಯದ ಇಂಪು
ಮಮತೆಯ ಮಡಿಲಲ್ಲಿ ವಾತ್ಸಲ್ಯ ಜೇನಾಗಿ
ಲಾಲಿ ಹಾಡು ಪುಟ್ಟಿಗೆ ನಾ ಮೊದಲ ಪಾಪು
ಬಸವರಾಜ ಕಾಸೆ