ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಪದವಿ ಪೂರ್ವ ಕಾಲೇಜಿನ ತರಗತಿ ಕೋಣೆ , ಲ್ಯಾಬ್ ಕೊಠಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ದಿಂದ 3 ಕೋಟಿ 55 ಲಕ್ಷ ರೂ ಮಂಜೂರಾತಿ ಗೊಂಡಿದ್ದು ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಬಂಟ್ವಾಳ ಕ್ಷೇತ್ರ ದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ
ಸಿದ್ಧಕಟ್ಟೆ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ , ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಉದ್ಯೋಗ ಬಯಸಿ ವ್ಯಾಸಂಗ ಮಾಡದೇ ಸ್ವ ಉದ್ಯೋಗದತ್ತ ಗಮನ ಹರಿಸಬೇಕಾಗಿದ್ದು, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ವಿಷಯವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದರೆ ಯಶಸ್ವಿ ಸಾಧ್ಯ. ಈ ನಿಟ್ಟಿನಲ್ಲಿ ಯುವ ಜನತೆ ಗುರಿ ಮುಟ್ಟಲು ಹಾಗೂ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಭಾರತ ಜಗದ್ಗುರುವಾಗಲು ಪಣತೊಡಬೇಕೆಂದರು.
ಮುಖ್ಯ ಅತಿಥಿಯಾಗಿ ಕಾಲೇಜು ಅಭಿವೃಧಿ ಸಮಿತಿಯ ಉಪಾಧ್ಯಕ್ಷ ಹಾಗೂ ತಾ.ಪಂ. ಸದಸ್ಯರೂ ಆದ ಪ್ರಭಾಕರ ಪ್ರಭು ಮಾತಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯು ಪಲಾಯನವಾಗದೇ ಇಡೀ ರಾಷ್ಟ್ರಕ್ಕೆ, ಸಮಾಜಕ್ಕೆ ಸಂಚಲನವಾದಾಗ ಮಾತ್ರ ಪ್ರತಿಭೆ ಅರಳಲು ಸಾಧ್ಯವೆಂದರು.

ಮೂಡಬಿದಿರೆ ರೋಟರಿ ಕ್ಲಬ್ ವತಿಯಿಂದ ಕಾಲೇಜಿಗೆ ಡೆಸ್ಕ್ ,ಬೆಂಚ್ ಒದಗಿಸಿದ್ದಕ್ಕೆ ಕ್ಲಬ್ ‌ ಅಧ್ಯಕ್ಷ ಡಾ.ರಮೇಶ ಇವರನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅಭಿನಂದಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ ಉಪಾಧ್ಯಕ್ಷ ಸತೀಶ್ ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೆ. ರತ್ನ ಕುಮಾರ್ ಚೌಟ, ಪ್ರೌಢ ಶಾಲಾ ಅಭಿವೃಧಿ ಸಮಿತಿ ಉಪಾಧ್ಯಕ್ಷ ಉಮೇಶ್ ಗೌಡ, ಗ್ರಾ.ಪಂ.ಸದಸ್ಯರಾದ ಎಸ್.ಪಿ.ಶ್ರೀಧರ್, ಸುರೇಶ್ ಕುಲಾಲ್, ಮಾಧವ ಶೆಟ್ಟಿಗಾರ್, ಬೇಬಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ಪ್ರಪುಲ್ಲ ರೈ ಮಂಜನದೂಟ್ಟು, ಸೀತಾರಾಮ ಶೆಟ್ಟಿ , ಮಂದಾರತಿ ಎಸ್ ಶೆಟ್ಟಿ, ವಸಂತಿ ಪಿ.ಶೆಟ್ಟಿ, ಅಚ್ಚುತ ಆಚಾರ್ಯ, ಯೋಗೀಶ್ ಕರ್ಪೆ, ವಿಶ್ವನಾಥ ಶೆಟ್ಟಿಗಾರ್, ಕೇಶವ ಶಬರೀಶ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯನಾ ರಾಯಣ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಉದಯ ಕುಮಾರ್ ಪ್ರಸ್ತಾವಿಕ ಮಾತನಾಡಿ ವರದಿ ವಾಚಿಸಿದರು. ಉಪನ್ಯಾಸಕ ಶ್ರೀನಿವಾಸ್ ನಾಯ್ಕ್ ಸ್ವಾಗತಿಸಿದರು.
ವಿದ್ಯಾರ್ಥಿ ಸಂಘದ ನಾಯಕ ಸುಭಾಷ್ ಬಂಗೇರ ವಂದಿಸಿದರು. ಉಪನ್ಯಾಸಕ ಸಂಜಯ್ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here