ಹ್ಯಾಂಗ್ಯಾಂಗೋ ಹರಕೊಂತ
ಹೊಂಟೈತಿ ಈ ಬಾಳಿನ ಝರಿ
ಅದು ಲಗೂನ ಬಂದು ಕೂಡ್ಲಿ
ನಂ ಪ್ರೀತೀ ಕೆರಿ



ನೀ ನಕ್ಕೋಂತ ಈ ಹೊಚ್ಚ
ಹೊಸಾ ವರ್ಷಾ ಕರಿ
ಜಲ್ಲ ಬಿಟ್ಟು ನಿನ್ನ ಹಿರಿಯಾನ
ಮನಸಿನ ಕೂಡ ಬೆರಿ
ಹಿಂದ ಬಂದು ಹ್ವಾದ
ಕಷ್ಟಾನೆಲ್ಲ ಪೂರಾ ಮರಿ
ಅದರ ಗೊಡವೀನ ಇನ್ನ
ಮ್ಯಾಲೆ ಬ್ಯಾಡ ಸರಿ
ಚಿಂತಿಲ್ದ ನನ್ ಎದಿರಾಣಿ
ಯಾಗಿ ನೀ ಇನ್ನ ಮೆರಿ
ಪಾ..ಪ! ಅದನ್ನ ದಾರಿ
ನೋಡ್ತಾನ ಈ ನಿನ್ ದೊರಿ
#ನೀ ಶ್ರೀಶೈಲ ಹುಲ್ಲೂರು