ವಿಟ್ಲ: ಪುಣಚ ಗ್ರಾಮದ ದಲ್ಕಜೆಗುತ್ತು ಜಠಧಾರಿ ಮಲರಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಡಿ.28 ಮತ್ತು 29 ರಂದು ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ. ಡಿ.28 ರಂದು ಮಹಾಗಣಪತಿ ಹೋಮ, ನಾಗತಂಬಿಲದ ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆಯಲಿದೆ. ಅಂದು ಪುದಕ್ಕೋಲ, ಕಾಡೆತ್ತಿ, ಜಠಾಧಾರಿ, ರಕ್ತೇಶ್ವರಿ, ಗುಳಿಗ, ಜುಮಾದಿ, ಡಿ.29 ರಂದು ಬೆಳಗ್ಗೆ ಮಲರಾಯ, ಸಂಜೆ ಪೊಟ್ಟ ಪಂಜುರ್ಲಿ, ಸತ್ಯದೇವತೆ, ಅಂಗಾರಕ್ಕುಡ ಕೋಲ, ಪಂಜುರ್ಲಿ ಆಗೂ ಉಪ ದೈವಗಳ ನೇಮೋತ್ಸವ ನಡೆಯಲಿದೆ.
