ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು (ರಿ.), ವಲಯ ಬಂಟರ ಸಂಘ , ಸಜೀಪ ಇವರ ಸಹಕಾರದೊಂದಿಗೆ ವಾರ್ಷಿಕ ಕ್ರೀಡೋತ್ಸವ 2018 ಶ್ರೀ ಕ್ಷೇತ್ರ ಮಿತ್ತಮಜಲು ಗದ್ದೆಯ ವರ್ಣ ರಂಜಿತ ಕ್ರೀಡಾಂಗಣ ದಲ್ಲಿ ಡಿ.2 ರಂದು ವಿದ್ಯುಕ್ತವಾಗಿ ನಡೆಯಿತು.
ಕಾರ್ಯಕ್ರಮ ವನ್ನು ಬಂಟರ ಸಂಘ ಬಂಟವಾಳ ಇದರ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು
ಕ್ರೀಡೆಯಿಂದ ಪ್ರೀತಿ, ಮಿತ್ರತ್ವ ಮತ್ತು ಒಗ್ಗಟ್ಟು ಬೆಳೆಸಲು ಸಾಧ್ಯ ಎಂದರು.
ಬಂಟ ಸಮುದಾಯದ ಎಲ್ಲರನ್ನು ಒಂದೇ ವೇದಿಕೆಯಡಿಯಲ್ಲಿ ಕ್ರೀಡೆ ಯ ಮೂಲಕ ಒಗ್ಗೂಡಿಸುವ ಪ್ರಯತ್ನ ಮಾಡಿದ್ದೇವೆ.
ಕ್ರೀಡೆ ಯಲ್ಲಿ ಶಿಸ್ತು ಸಂಯಮ ನೀತಿ ನಿಯಮ ಗಳನ್ನು ಪಾಲಿಸಿ, ಜೀವನದಲ್ಲಿ ಅಳವಡಿಸಿ ಎಂದು ಅವರು ಹೇಳಿದರು.
ಕಾರ್ಯಕ್ರಮ ದ ಆರಂಭದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಕ್ರೀಡಾ ಧ್ವಜಾರೋಹಣ ನಡೆಸಿ ಧ್ವಜವಂದನೆ ಸ್ವೀಕರಿಸಿದರು. ಬಂಟರ ಸಂಘ ಬಂಟವಾಳ ತಾಲೂಕು ಅದ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಬಲೂನ್ ಹಾರಿಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಬಂಟರ ಸಂಘ ಸಜೀಪ ವಲಯದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಮಾಜಿ ಜಿ.ಪಂ.ಅಧ್ಯಕ್ಷ ಸದಾನಂದ ಪೂಂಜಾ , ಕಾಂತಾಡಿಗುತ್ತು ಗಣೇಶ್ ನಾಯ್ಕ್ ಯಾನೆ ಉಗ್ಗ ಶೆಟ್ಟಿ , ಸಜೀಪಗುತ್ತು ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪುರಸಭಾ ಸದಸ್ಯ ರಾಮಕ್ರಷ್ಣ ಆಳ್ವ, ಮಾಜಿ ಜಿ.ಪಂ.ಸದಸ್ಯ ಸಂತೋಷ್ ಕುಲಾರ್ ಬೋಳಿಯಾರ್, ಹಿರಿಯ ಸಾಹಿತಿ ಏರ್ಯಲಕ್ಮೀನಾರಾಯಣ ಆಳ್ವ,
ಉದ್ಯಮಿ ಸದಾಶಿವ ಶೆಟ್ಟಿ,
ಬಂಟವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನ್ ಶೆಟ್ಟಿ ಮುಂಡಾಜೆಗುತ್ತು, ಬಂಟರ ಸಂಘ ಬಂಟವಾಳ ವಲಯ ಮಹಿಳಾ ಅಧ್ಯಕ್ಷೆ ಆಶಾ ಪಿ.ರೈ, ಕ್ರೀಡೋತ್ಸವ ಸಮಿತಿ ಸಂಚಾಲಕ ಗಂಗಾದರ ರೈ ತುಂಗೆರೆಕೋಡಿ, ಸಜೀಪ ವಲಯ ಕಾರ್ಯದರ್ಶಿ ನಿತಿನ್ ಅರಸ, ಕೋಶಾಧಿಕಾರಿ ಬಾಲಕ್ರಷ್ಣ ಅರಸ , ಸಜೀಪ ವಲಯ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಹಿರಿಯರಾದ ಪ್ರಪುಲ್ಲಾ ವಿಠಲಕೋಡಿ, ಹಾಗೂ ಬಂಟವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರು, ಮತ್ತು ಎಲ್ಲಾ ವಲಯ ಅಧ್ಯಕ್ಷ ರು, ಪದಾಧಿಕಾರಿಗಳು ಸರ್ವ ಸದಸ್ಯರು ಗಳು ಉಪಸ್ಥಿತರಿದ್ದರು.
ಬಾಲಕ್ರಷ್ಣ ಶೆಟ್ಟಿ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.