ವಿಟ್ಲ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನೂತನ ಸಂಘ ಒಡಿಯೂರು ಶ್ರೀ ದತ್ತಾಂಜನೇಯ ಮತ್ತು ಶ್ರೀವಿಷ್ಣು ವಿಕಾಸವಾಹಿನಿ ಸ್ವ-ಸಹಾಯ ಸಂಘವನ್ನು ಚಿಪ್ಪಾರು ಜಯಂತ್ ಅವರ ಮನೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ದತ್ತಾಂಜನೇಯ ವಿಕಾಸ ವಾಹಿನಿಯ ಅಧ್ಯಕ್ಷರಾಗಿ ಪುರುಷೋತ್ತಮ ಕುರುವೇರಿ, ಕಾರ್‍ಯದರ್ಶಿಯಾಗಿ ವೇಣುಗೋಪಾಲ ಚಿಪ್ಪಾರು ಇವರನ್ನು ಆಯ್ಕೆ ಮಾಡಲಾಯಿತು.
ವಿಷ್ಣು ವಿಕಾಸವಾಹಿನಿಯ ಅಧ್ಯಕ್ಷರಾಗಿ ಮಮತಾ ಚಿಪ್ಪಾರು, ಕಾರ್‍ಯದರ್ಶಿಯಾಗಿ ಪ್ರಮೀಳಾ ಕುರುವೇರಿ ಇವರನ್ನು ಆಯ್ಕೆ ಮಾಡಲಾಯಿತು. ಕನ್ಯಾನ ಗ್ರಾಮದ ಸೇವಾದೀಕ್ಷಿತೆ ಶಶಿಕಲಾ ಉಪಸ್ಥಿತರಿದ್ದರು. ಬಾಯಾರು ಗ್ರಾಮದ ಸೇವಾದೀಕ್ಷಿತ ರಾಧಾಕೃಷ್ಣ.ಕೆ ಸ್ವಾಗತಿಸಿ, ಯೋಜನೆಯ ಮಾಹಿತಿ ನೀಡಿದರು.
