ಅಲ್ಲವೋ ಅಲ್ಲ
ಇದು ಪ್ರಜಾಪ್ರಭುತ್ವ
ಇದೆಲ್ಲ ಕಾಳ ಧನಿಕರ
ಮಜಾಪ್ರಭುತ್ವ!



ಯಾವ ಬಡವನೂ
ಎದುರಿಸಲಾರ ಚುನಾವಣೆ
ಧನದಾಹಿಗಳದೇ
ನೋಡಿದಲ್ಲೆಲ್ಲ ಚಿತಾವಣೆ
ಅವರ ಹಿಂದೆಯೇ
ಹೊರಟಿದೆ ಕುರಿಮಂದೆ
ನೋಡ್ತಾನೇ ಇಲ್ಲ ಬಡವ
ಏನಿದೆ ಮುಂದೆ?
ಎಂಜಲು ನಾಯಿಯಂತೆ
ಇವನು ಅವರ ಹಿಂದೆ
ಜಾತಿ ಹಣ ಹೆಂಡ
ಈಗ ಇವರ ತಂದೆ
ಸುಖಿಸುವರೀಗ ಎಲ್ಲ
ಐದು ದಿನದ ಮೋಜು
ಕೊಡುತ್ತಾರವರು ಹೀಗೇ
ಐದು ವರ್ಷ ನೋಡುವ ಪೋಜು
ನಂಬಿ ಹೊರಟಿದೆ
ಪಾ.. ಪ, ಮುಗ್ಧ ಬಡಪಾಯಿ!
ಎಂದೆಂದೂ ಇವ ಸಿರಿವಂತನ
ನಂಬುಗೆಯ ನಾಯಿ!
ಕಾಣುತ್ತೇನ್ರೀ ಎಲ್ಲಾದರೂ
ಈ ಭವ್ಯ ದೇಶದಿ ಪ್ರಜಾರಾಜ್ಯ?
ದೊಡ್ಡ ದೊಡ್ಡ ಮಿಕಗಳೇ
ಮೆರೆಯುತ್ತಿರುವುದು ಎಂಥ ಚೋದ್ಯ!
#ನೀ. ಶ್ರೀಶೈಲ ಹುಲ್ಲೂರು