ಯಾಕೆ ನಾಚುವಿರಿ ಮೋಡಗಳೆ?
ಕೆನೆಗಟ್ಟಲು ಹನಿಗುಟ್ಟಲು
ಆಗಸದಪ್ಪ ನಪ್ಪಣೆ ಬೇಕೆ?
ಪವನದಣ್ಣನ ಮನ್ನಣೆ ಬೇಕೆ?
ಇಳೆಯರಸಿಯ ತೋಳಬಂದಿ ಬೇಕೆ?
ಸಾಗರ ದೊಡೆಯನ
ಹರವಾದೆದೆ ಬಯಲು ಬೇಕೆ?
ಯಾವುದೂ ಬೇಡ
ವೆನಿಸಿದರೆ ಬಂದು
ಬಿಡಿ ಬೇಗ ಇರುಳ
ರಸ ಕುಡಿಸಿ ಬೆಳದಿಂಗಳ
ಲಾಲಿ ಹಾಡಿ ತಾರೆಗಳ
ಮುತ್ತನೊತ್ತುವೆ ಮೈತುಂಬ
ಒಲವ ತುತ್ತುಗಳ ನಿಡುವೆ
ಬಾಯ್ತುಂಬ ಬಾಳ್ತುಂಬ!


#ನೀ.ಶ್ರೀಶೈಲ ಹುಲ್ಲೂರು
ಜಮಖಂಡಿ – 587301