ಅಕ್ಕನೊಲವಲಿ ಸುರಿದ ನೊರೆವಾಲ
ನಾ ಕುಡಿದು ನಲಿದ ಘಳಿಗೆ
ಸಂಭ್ರಮದ ಸಗ್ಗವನು ಧರೆಗಿಳಿಸಿದಾದೇವಿ
ಬಂದಳೋಡುತಲೆನ್ನ ಬಳಿಗೆ

ತಾನುಡುವ ಮುನ್ನವೇ ನನಗುಡಿಸಿ
ಖುಷಿಪಟ್ಟ ಸ್ನೇಹ ಜೀವಿ
ಏನೇ ತಂದರೂ ತನಗೆ ನನಗಿಟ್ಟು
ತಾನುಲಿವ ನನ್ನ ದೇವಿ

ಅಳುವಿನಲು ಅಂದವನು ತುಂಬಿ ಬೆನ್
ಕೆನ್ನೆಯನು ತಟ್ಟಿದಾಕೆ
ಬಿರುಸು ಬಾಣಗಳನೆಲ್ಲ ಅಲ್ಲಲ್ಲಿ ತುಂಡರಿಸಿ ದೈರ್ಯವನೆ ಕಟ್ಟಿದಾಕೆ

ಅಮ್ಮನೊಲವನು ಮರೆಸಿ ತನ್ನ ತೋಳ್ತೆಕ್ಕೆಯಲಿ ಷಡ್ರಸವನುಣಿಸಿದಾಕೆ
ಏಳು ಬೀಳುಗಳಲು ಸಮಚಿತವ್ತನೆ ಬಿತ್ತಿ
‍‍‍ನಾಕವನು ಮಣಿಸಿದಾಕೆ

#ನೀ. ಶ್ರೀಶೈಲ ಹುಲ್ಲೂರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here