ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ 18 ಒಟಿಟಿ ಪ್ಲಾಟ್ಫಾರ್ಮ್ಗಳನ್ನ ನಿಷೇಧಿಸಿದೆ.

ಭಾರತೀಯರು ಬಳಸುತ್ತಿದ್ದ 19 ವೆಬ್ಸೈಟ್ಗಳು, 10 ಆ್ಯಪ್ಗಳು ಮತ್ತು ಫ್ಲಾಟ್ಫಾರ್ಮ್ಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಷೇಧ ಹೂಡಿದೆ. ನಿಷ್ಕ್ರೀಯಗೊಳಿಸಲಾದ ಪ್ಲಾಟ್ಫಾರ್ಮ್ಗಳು ಅಶ್ಲೀಲ, ಅಸಭ್ಯ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿತ್ತು. ಇದನ್ನು ಗುರುತಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷ್ಕ್ರೀಯ ಗೊಳಿಸಿದೆ
ನಿಷೇಧಿತ OTT ಪ್ಲಾಟ್‌ಫಾರ್ಮ್‌ಗಳ ಪಟ್ಟಿ
ಡ್ರೀಮ್ಸ್ ಫಿಲ್ಮ್ಸ್ (Dreams Films), ವೂವಿ (Voovi), ಯೆಸ್ ಮ (Yess Ma), ಅನ್ ಕಟ್ ಅಡ್ಡಾ (Uncut Adda), ಟ್ರೈ ಫ್ಲಿಕ್ಸ್ (Tri Flicks), ಎಕ್ಸ್ ಪ್ರೈಮ್ (X Prime), ನಿಯಾನ್ ಎಕ್ಸ್ ವಿಐಪಿ (Neon X VIP) ಮತ್ತು ಬೇಷರಮ್ಸ್( Besharams). ಇನ್ನುಳಿದಂತೆ ಒಟಿಟಿಗಳಾದ ಹಂಟರ್ಸ್ (Hunters), ರ್ಯಾಬಿಟ್ (Rabbit), ಎಕ್ಸ್ ಟ್ರಾ ಮೋಡ್ (Xtramood), ಮೂಡ್ ಎಕ್ಸ್ (MoodX), ಮೋಜ್ ಫ್ಲಿಕ್ಸ್ (Mojflix), ಹಾಟ್ ಶಾಟ್ಸ್ ವಿಪಿಐ (Hot Shots VIP), ಚಿಕೂಫ್ಲಿಕ್ಸ್(Chikooflix), ಪ್ರೈಮ್ ಪ್ಲೇ (Prime Play), ನ್ಯೂಫ್ಲಿಕ್ಸ್ (Nuefliks)ಮತ್ತು ಫಂಗಿ(Fungi).