ಓಜೋನ್ ಪದರದಲ್ಲಿ ಸಾಕಷ್ಟು ರಂಧ್ರ
ಬಿಡದೆ ಏರುತ್ತಿದೆ ಜಾಗತಿಕ ತಾಪಮಾನ
ಇನ್ನಿಲ್ಲದಂತೆ ಹದಗೆಡುತ್ತಿದೆ ಹವಾಮಾನ
ಪರಿಸರ ನಾಳೆಗಳ ಬದಲಿಸುವ ಸಾಧನ


ವರ್ಷವೊಂದಕ್ಕೆ ನೂರಾರು ಪೌಂಡಗಟ್ಟಲೆ ಒಂದು ಮರ ಉತ್ಪಾದಿಸಬಲ್ಲ ಆಮ್ಲಜನಕ
ಜೀವಿಗಳ ಸೇವನೆ ಅದರ ಬಹುಪಾಲು
ವ್ಯರ್ಥ ಇಂಗಾಲ ಹೀರಿ ಕಾಪಾಡುವ ರಕ್ಷಕ
ಈ ಜನ್ಮ ಪೂರ್ತಿ ಎಷ್ಟು ದುಡಿದರೂ
ತೀರಿಸಲಾಗದು ಪ್ರಕೃತಿಯ ಋಣ
ಮಾಡುತ್ತಿರುವೆವು ಎಂತಹ ಪಾಪದ ಕೆಲಸ
ನೈಸರ್ಗಿಕ ಜೀವನ ತಿಳಿಸದ ವ್ಯರ್ಥ ಶಿಕ್ಷಣ
ಉನ್ನತ ಬಾಹಾಕಾಶ್ಯ ವಿಜ್ಞಾನ ತಂತ್ರಜ್ಞಾನ
ಅದು ಏನಿದ್ದರೇನು ಪ್ರಯೋಜನ
ಇಲ್ಲದೆ ಹೋದರೆ ಪರಿಸರ ಜ್ಞಾನ
ಗಿಡ ನೆಟ್ಟು ಹೆಚ್ಚಿಸಿ ಹಸಿರು ಪ್ರಮಾಣ
ಬಸವರಾಜ ಕಾಸೆ