ವಿಟ್ಲ: ವಿಠಲ ವಿದ್ಯಾ ಸಂಘ ವಿಟ್ಲ ಇದರ ವಾರ್ಷಿಕೋತ್ಸವದ ಪ್ರಯುಕ್ತ ವಿಠಲ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಸಭಾ ಕಾರ್‍ಯಕ್ರಮ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿಯ ಆಯುರ್ವೇದ ತಜ್ಞೆ ಡಾ. ಸೌಮ್ಯ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ದೆಸೆಯಲ್ಲಿ ಭವಿಷ್ಯದ ಬಗ್ಗೆ ತಿಳಿದಿರುವುದಿಲ್ಲ. ಆದರೆ ವರ್ತಮಾನವು ಅವರೊಂದಿಗಿರುತ್ತದೆ. ಪ್ರತಿಯೊಬ್ಬರೂ ಉತ್ತಮ ದಿನಚರಿಯೊಂದಿಗೆ ಸ್ವ-ಆಸಕ್ತಿ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆಗಳೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಕಳ ಸಾಣೂರು ಪ್ರಕೃತಿ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಅಶೋಕ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ಗುರುಗಳ, ಹೆತ್ತವರ ಮತ್ತು ಸಮಾಜದಿಂದ ಉತ್ತಮ ಮೌಲ್ಯಗಳನ್ನು ಪಡೆಯಬೇಕೆಂದರು.
ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರುಗಳಾದ ಬಾಬು ಕೊಪ್ಪಳ ಮತ್ತು ಪದ್ಮಯ್ಯ ಗೌಡ, ವಿಠಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಾದ ರಚನಾ, ಕಲ್ಪಿತಾ ಮತ್ತು ಬಳಗದವರು ಆಶಯಗೀತೆ ಹಾಡಿದರು. ವಿಠಲ ವಿದ್ಯಾ ಸಂಘದ ಕಾರ್‍ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿಠಲ ಸುಪ್ರಜಿತ್ ಐಟಿಐ ಪ್ರಿನ್ಸಿಪಾಲ್ ಐಟಿಐ ವರದಿ ವಾಚಿಸಿದರು.
ಉಪನ್ಯಾಸಕರುಗಳಾದ ಚಂದ್ರಕಲಾ ಮತ್ತು ಪ್ರಕಾಶ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಪೂರ್ಣಿಮಾ ವಂದಿಸಿದರು. ವಿದ್ಯಾರ್ಥಿಗಳಾದ ಪ್ರಜ್ವಲ್ ಮತ್ತು ಸೆಲಿಆನಾ ಕಾರ್‍ಯಕ್ರಮ ನಿರೂಪಿಸಿದರು. ಉಪನ್ಯಾಸಕರುಗಳಾದ, ಸಂಪಾವತಿ, ಸವಿತಾ, ಚಂದ್ರಕಾಂತ ಮತ್ತು ಸುಚೇತನ್ ಜೈನ್ ಸಹಕರಿಸಿದರು.

