<strong><span data-mce-type=”bookmark” style=”display: inline-block; width: 0px; overflow: hidden; line-height: 0;” class=”mce_SELRES_start”></span>ಬಂಟ್ವಾಳ: </strong>ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ವಾರ್ಷಿಕ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ಬಂಟ್ವಾಳ ವಲಯ ಹಾಗೂ ಮೊಡಂಕಾಪ್ ಚರ್ಚ್ ನ ಧರ್ಮ ಗುರುಗಳಾದ ವಂ. ವಾಲ್ಟರ್ ಡಿಮೆಲ್ಲೊ ದಿವ್ಯ ಬಲಿ ಪೂಜೆಯನ್ನು ಸಂಭ್ರಮದಲ್ಲಿ ಹಾಜರಿದ್ದ ಸಾವಿರಾರು ಭಕ್ತಾದಿಗಳೊಂದಿಗೆ ಅರ್ಪಿಸಿದರು.


<img src=”https://nammabantwala.com/wp-content/uploads/2018/12/IMG-20181202-WA0029-500×334.jpg” alt=”” width=”500″ height=”334″ class=”alignnone size-medium wp-image-38913″ />
<img src=”https://nammabantwala.com/wp-content/uploads/2018/12/IMG-20181202-WA0032-500×334.jpg” alt=”” width=”500″ height=”334″ class=”alignnone size-medium wp-image-38915″ />
<img src=”https://nammabantwala.com/wp-content/uploads/2018/12/IMG-20181202-WA0020-500×334.jpg” alt=”” width=”500″ height=”334″ class=”alignnone size-medium wp-image-38916″ />
<img src=”https://nammabantwala.com/wp-content/uploads/2018/12/IMG-20181202-WA0027-500×334.jpg” alt=”” width=”500″ height=”334″ class=”alignnone size-medium wp-image-38912″ />
<img src=”https://nammabantwala.com/wp-content/uploads/2018/12/IMG-20181202-WA0036-1-500×334.jpg” alt=”” width=”500″ height=”334″ class=”alignnone size-medium wp-image-38917″ />
ಲೋರೆಟ್ಟೊ ಚರ್ಚ್ ನ ಧರ್ಮಗುರುಗಳಾದ ವಂ.ಎಲಿಯಸ್ ಡಿಸೋಜಾ, ಫರಂಗಿಪೇಟೆ ಕಾಪುಚಿನ್ ಧರ್ಮಗುರುಗಳಾದ ವಂ.ಜೆರಾಲ್ಡ್ ಲೋಬೊ,ಆಗ್ರಾರ್ ಚರ್ಚ್ ನ ಧರ್ಮಗುರುಗಳು, ಬಾಂಬಿಲ್ ಚರ್ಚ್ ನ ಧರ್ಮಗುರುಗಳು ಹಾಗೂ ವಲಯದ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.
ವಾರ್ಷಿಕ ಸಂಭ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಿದರು.
ನವೆಂಬರ್ 29 ರಿಂದ ಡಿಸೆಂಬರ್1 ರ ವರೆಗೆ 3 ದಿವಸಗಳ ನೋವೇನಾ ಬಲಿಪುಜೆಯಲ್ಲಿ ನೂರಾರು ಭಕ್ತಾಧಿಗಳು ಮೇಣದ ಬತ್ತಿಗಳನ್ನು ಉರಿಸಿ ಭಕ್ತಿಯಿಂದ ಪಾಲ್ಗೊಂಡರು. ಫ್ಲವರ್ ಡೇಕೋರೇಟರ್ಸ್ ಚರ್ಚ್ ನ ವೇದಿಕೆಯನ್ನು ಅಲಂಕರಿಸಿದ್ದರು. ಚರ್ಚ್ ಪಾಲನಾ ಮಂಡಳಿಯು ಸಂಭ್ರಮದ ಉಸ್ತುವಾರಿಯನ್ನು ವಹಿಸಿತ್ತು. ಧರ್ಮಗುರುಗಳು ಸಂಭ್ರಮಕ್ಕೆ ಸಹಕರಿಸಿದವರಿಗೆ ವಂದಿಸಿದರು.
<span data-mce-type=”bookmark” style=”display: inline-block; width: 0px; overflow: hidden; line-height: 0;” class=”mce_SELRES_end”></span>