Tuesday, July 1, 2025

ಮಾಡರ್ನ್ ಕವನ-ನಾನು ಸಾಯ್ಲಿಲ್ಲ

ಯಾರೇ ಬಂದು ಹೋದರು
ಏನೇ ಅಂದರು
ಏ‌ನೇ ಆದರು
ನಾನು ಸಾಯ್ಲಿಲ್ಲ.

ಹಿಂಸೆ ಮಹಾ ಪಾಪ
ಆಸೆಯೇ ದುಃಖಕ್ಕೆ ಮೂಲ
ಎಂದು ಬುದ್ದ ಅಂದರು
ನಾನು ಹೌದೌದು ಅಂದಿದ್ದೆ
ಆದರೂ ನಾನು ಸಾಯಲ್ಲಿಲ್ಲ…!?


ಎಲ್ಲ ಬಿಟ್ಟು ದಿಗಂಬರನಾಗಿ ನಿಂತ
ಬಾಹುಬಲಿ ಯನ್ನು ನಾ ಕಂಡಿದ್ದೇನೆ
ಅವೆನೆತ್ತರವ ಅಳೆದಿದ್ದೇನೆ
ಅವನ ಕಥೆ ಓದಿದ್ದೇನೆ.
ಆದರೂ ನಾನು ಸಾಯಲಿಲ್ಲ..!?

ಅಲೆಗ್ಸಾಂಡರ್ ಪರಾಕ್ರಮ
ಜಗ ಗೆಲ್ಲುವ ಬಯಕೆ
ಕೊನೆಗೆ ಬರಿಗೈಯ್ಯಲ್ಲಿ
ಇಹಲೋಕ ಯಾತ್ರೆ ಮಾಡಿದ್ದು
ಎಲ್ಲಾ ಗೊತ್ತಿದೆ
ಆದರೂ ‌ನಾನು ಸಾಯಲಿಲ್ಲ..!?

ಕೋಟೆ ಕಟ್ಟಿ ಮೆರೆದವರೆಲ್ಲ
ಮಣ್ಣಾದರು
ಎನ್ನುವ ಹಾಡ ಮತ್ತೆ ಮತ್ತೆ ಕೇಳಿಸಿಕೊಂಡಿದ್ದೇನೆ
ಆದರೂ ನಾನು ಸಾಯಲಿಲ್ಲ…!?

ಹೌದು ನಾನು ಸಾಯಲಿಲ್ಲ
ನನ್ನೊಳಗಿರುವ ನಾನು ಸಾಯಲಿಲ್ಲ
ನನ್ನದು ನನ್ನದು ಅನ್ನುವುದ ಬಿಡಲಿಲ್ಲ..

ನಾನು ಸಾಯಲಿಲ್ಲ
ಸಾಯುವುದೂ ಇಲ್ಲ…!

✍ಯತೀಶ್ ಕಾಮಾಜೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...