Wednesday, January 28, 2026

ಬುರ್ಖಾ ಅಂಗಡಿ ಮಾಲಕ ನೇಣು ಬಿಗಿದು ಆತ್ಮಹತ್ಯೆ

 

ಬಂಟ್ವಾಳ: ಫೆ.19  ತಾಲೂಕಿನ ಬಿ.ಸಿ.ರೋಡ್ ಕೈಕಂಬದಲ್ಲಿರುವ ಮಳಿಗೆಯೊಂದರ ಮಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಕೈಕಂಬ ಸಮೀಪದ ಪರ್ಲ್ಯ ನಿವಾಸಿ, ಕೈಕಂಬದಲ್ಲಿರುವ ಲಿಬಾಸ್ ಬುರ್ಖಾ ಮಳಿಗೆಯ ಮಾಲಕ ಅಬ್ದುಲ್ ರಹ್ಮಾನ್ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಎಂದಿನಂತೆ ಇಂದು ಕೂಡಾ ಅಂಗಡಿಗೆ ಬಂದಿರುವ ಅಬ್ದುಲ್ ರಹ್ಮಾನ್ ಅಂಗಡಿಯ ಒಳಗಿನ ಮೇಲಂತಸ್ತಿನಲ್ಲಿರುವ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಮೇಲಂತಸ್ತಿಗೆ ತೆರಳುವ ಮುನ್ನ ಅಂಗಡಿಯ ಕೆಲಸದಾಕೆಯ ಬಳಿ ತನ್ನ ಮೊಬೈಲ್ ಗೆ ಕರೆ ಬಂದರೆ ಸ್ವೀಕರಿಸದಂತೆ ಹೇಳಿ ತೆರಳಿದ್ದರು. ಕೆಲವು ಹೊತ್ತಿನ ಬಳಿಕ ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೆಲವು ದಿನಗಳಿಂದ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

More from the blog

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...

ವಿಟ್ಲ ಪಡ್ನೂರು : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ...

ಪುತ್ತೂರು : ಅಕ್ರಮ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ – ನಾಲ್ವರ ಬಂಧನ

ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ದ್ದಾರೆ ಮೊಹಮ್ಮದ್ ಹರ್ಷದ್...