ಬಂಟ್ವಾಳ : ಬಂಟ್ವಾಳ ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಬಾಳ್ತಿಲ ಗ್ರಾಮ ಪಂಚಾಯತ್ ನಲ್ಲಿ “ಸಂಜೀವಿನಿ” ಸ್ತ್ರೀ ಶಕ್ತಿ ಗ್ರಾಮ ಒಕ್ಕೂಟಕ್ಕೆ ಚಾಲನೆ.
ಬಾಳ್ತಿಲ ಗ್ರಾಮದ ಎಲ್ಲಾ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳು ಸೇರಿಕೊಂಡು ತಮ್ಮ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಉತ್ಪಾದನಾ ಚಟುವಟಿಕೆಗಳನ್ನು ನಡೆಸಲು ಪಂಚಾಯತ್ ಮಟ್ಟದ “ಕಲ್ಪತರು ” ಸಂಜೀವಿನಿ ಒಕ್ಕೂಟಕ್ಕೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.








ಮಹಿಳೆಯರು ಮುನ್ನಡೆಸುವ ಟೈಲರಿಂಗ್, ಬಟ್ಟೆ ಚೀಲ ತಯಾರಿಕೆ, ಬೇಕರಿ ಉತ್ಪನ್ನಗಳು, ಚೆಂಡು ಹೂ ಕೃಷಿ,ಮಾರಾಟ ಮಳಿಗೆ ಇತ್ಯಾದಿಗಳಿಗೆ ಬ್ಯಾಂಕ್ ಮತ್ತು ನರೇಗಾದ ಮೂಲಕ ಒದಗಿಸುವ NRLM ಶೆಡ್ ನಲ್ಲಿ ಮಹಿಳೆಯರು ಈ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಈ ಕಾರ್ಯಕ್ರಮದಲ್ಲಿ CEO ರವರು ಚೆಂಡು ಹೂ ಬೀಜ ಹಾಕಿ, ತೆಂಗಿನ ಸಸಿ ನೆಟ್ಟು ಯೋಜನೆಯ ಮಾಹಿತಿ ನೀಡಿದರು. ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾ. ಪಂ. ಅಧ್ಯಕ್ಷರಾದ ಶ್ರೀ ವಿಠಲ್ ‘ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಹಕರಿಸಿ, ಆರ್ಥಿಕ ಸ್ವಾವಲಂಬನೆಗೆ ಬೆಂಬಲವಾಗಿ ನಿಲ್ಲುವುದಾಗಿ’ ತಿಳಿಸಿದರು.
ಸಭೆಯಲ್ಲಿ ಜಿ. ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ. ಪಂ. ಸದಸ್ಯೆ ಲಕ್ಷ್ಮೀಗೋಪಾಲಾಚಾರ್ಯ, ಪಂ. ಉಪಾಧ್ಯಕ್ಷೆ ಪೂರ್ಣಿಮ,ತಾ.ಪಂ.ವಿವಿಧ ಅಧಿಕಾರಿಗಳು, ಯೋಜನಾ ನಿರ್ದೇಶಕರು, ಗ್ರಾ.ಪಂ.ಸದಸ್ಯರು, ಒಕ್ಕೂಟದ ಸದಸ್ಯೆಯರು, ಪಂಚಾಯತ್ ಸಿಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ತಾ. ಪಂ. EO ರಾಜಣ್ಣ,ಪ್ರಾಸ್ತಾವಿಕ ಭಾಷಣ ಮಾಡಿದರು. PDO ಸಂಧ್ಯಾ ಸ್ವಾಗತಿಸಿ, ಪೂರ್ಣಿಮ ವಂದಿಸಿದರು. ಗ್ರಾ. ಪಂ. ಸದಸ್ಯ ವೆಂಕಟ್ರಾಯ ಪ್ರಭು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೂತನ “ಬಾಪೂಜಿ ಸೇವಾ ಕೇಂದ್ರ”ವನ್ನು ಉದ್ಘಾಟಿಸಲಾಯಿತು. ಸಭೆಯ ಬಳಿಕ CEOರವರು ಒಕ್ಕೂಟದ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿದರು.